ಬೆಳಗಾವಿ : ಪ್ರಯತ್ನ ವಿಫಲ ಆಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಎಲ್ಲರ ದುಃಖ ದೂರ ಮಾಡುವಂತೆ ದೇವಿಯ ಬಳಿ ಪ್ರಾರ್ಥಿಸಿದ್ದೇನೆ. ಈ ಜಾಗವನ್ನು ಅಭಿವೃದ್ಧಿ ಮಾಡಬೇಕೆಂದು ದಿಟ್ಟ ಪಣ ತೊಟ್ಟಿದ್ದೇವೆ. ಮುಜರಾಯಿ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲಿದ್ದೇವೆ.ಇಲ್ಲಿ 200 ರೂಂಗಗಳನ್ನು ಕಟ್ಟಿಕೊಡುವ ವಾಗ್ದಾನ ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಇದು ಭಾಗ್ಯ ಇದು ಭಾಗ್ಯ ಎಂದು ಪುರಂದರ ದಾಸರ ಹೇಳಿಕೆಯನ್ನು ಪ್ರಸ್ತಾಪಿಸಿ ನಾವು ಇಲ್ಲಿಗೆ ಬಂದಿದ್ದೆ ಭಾಗ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಭಕ್ತನಿಗೂ ದೇವರಿಗೂ ವ್ಯವಹಾರ ನಡೆಯುವ ಸ್ಥಳ ಅದು ದೇವಸ್ಥಾನ ಮಾತ್ರ.
ನನಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಕರೆ ಮಾಡಿ ಕರೆದರು.ಪ್ರಾಧಿಕಾರ ಮಾಡಬೇಕು ಅಂತ ಯಾರು ಕೇಳಿರಲಿಲ್ಲ. ಇದಕ್ಕೆ ಒಂದು ಸ್ವರೂಪ ಕೊಡಬೇಕು ಅಂತ ನಿರ್ಧಾರ ಮಾಡಲಾಗಿದೆ. ಅಧಿಕಾರಿಗಳು ಸಚಿವರ ಜೊತೆಗೆ ಸಭೆ ನಡೆಸಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಏನೆಲ್ಲಾ ಮಾಡಬೇಕು ಎಂದು ಚರ್ಚಿಸಿದ್ದೇವೆ. ಧಾರ್ಮಿಕತೆ ಜೊತೆಗೆ ಪ್ರವಾಸಿ ತಾಣ ಆಗಬೇಕೆಂದು ಹೇಳಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಬಿಜೆಪಿಯವರು ದೇವರು ಮತ್ತು ಧರ್ಮವನ್ನು ತಮ್ಮ ಆಸ್ತಿ ಅಂದುಕೊಂಡಿದ್ದಾರೆ. ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡಲು ಪ್ರಯತ್ನಿಸುತ್ತಾರೆ. ಧರ್ಮ ಯಾರೊಬ್ಬನ ಸ್ವತ್ತಲ್ಲ ದೇವನೊಬ್ಬ ನಾಮ ಹಲವು. ಧರ್ಮ ಪಾಲನೆ ವೈಯಕ್ತಿಕ ವಿಚಾರ ಯಾವ ಧರ್ಮವನ್ನ ಬೇಕಾದರೂ ನೀವು ಪಾಲನೆ ಮಾಡಬಹುದು ಎಂದು ಅವರು ತಿಳಿಸಿದರು.
ಗ್ಯಾರೆಂಟಿಯ 5 ವರ್ಷದ ಹಣ ದೇವಿಯ ಬಳಿ ಇಟ್ಟು ಕೇಳಿಕೊಂಡ್ವಿ. ಯೋಜನೆಯನ್ನ ನಡೆಸಿಕೊಡುವ ಶಕ್ತಿ ಕೊಡು ಎಂದು ಕೇಳಿಕೊಂಡಿದ್ದೇವೆ. ವೀರೇಂದ್ರ ಹೆಗಡೆಯವರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಧರ್ಮಸ್ಥಳಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದಾರೆ ಶಕ್ತಿ ಯೋಜನೆ ಜಾರಿಯಾದ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಗಿದೆ ಅಂದಿದ್ದಾರೆ ಎಂದು ಅವರು ಹೇಳಿದರು.
ಸಚಿವ ರಾಮಲಿಂಗಾರೆಡ್ಡಿ ಅರ್ಚಕರಿಗೆ ಇನ್ಸೂರೆನ್ಸ್ ಯೋಜನೆ ಮಾಡಿದ್ದರು. ಜೀವನೋದ್ಧಾರಕ್ಕೆ 5 ಲಕ್ಷ ರೂಪಾಯಿ ಕೊಡುವ ಯೋಜನೆ ಮಾಡಿದ್ದರು ನಾವು ಮಾಡಿದ ಬಿಲ್ ವಿರೋಧ ಮಾಡಿ ಅದನ್ನು ನಿಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಹಾಗೂ ಸಚಿವರ ಹೆಸರು ಹೇಳಿ ಅರ್ಚನೆ ಮಾಡಿದ್ದರು. ಅರ್ಚಕರು ಸಿಎಂ ಮತ್ತು ಸಚಿವರ ಹೆಸರು ಹೇಳಿ ರಚನೆ ಮಾಡಿದ್ದರು.
ಅರ್ಚಕರಿಗಾಗಿ ಯೋಜನೆ ತಂದರೆ ಬಿಜೆಪಿ ವಿರೋಧ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.30 ಕೋಟಿ ಅನುದಾನ ನೀಡಿ ಸಿಎಂ ಅಭಿವೃದ್ಧಿ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಬೊಮ್ಮಾಯಿ ಯಾಕೆ ಮಾಡಲಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.