ಬೆಂಗಳೂರು: ಸಿಲಿಕಾನ್ ಸಿಟಿಗೂ ತಟ್ಟಿದ ‘ಮಾಂಡಸ್ ಚಂಡಮಾರುತ’ ಎಫೆಕ್ಟ್ದಂತಾಗಿದ್ದು, ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆಯ ನಡುವೆಯೇ ಚಳಿ ವಿಪರೀತ ಇರಲಿದೆ. ಈಗಾಗಲೇ ಸಿಲಿಕಾನ್ ಸಿಟಿ ಮಂದಿ ಚಳಿಯಿಂದ ತತ್ತರಿಸಿ ಹೋಗಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮದಿಂದ ಬೆಂಗಳೂರಿನಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದೆ. ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಇನ್ನು ಮಾಂಡಸ್ ಚಂಡಮಾರುತ ಕರ್ನಾಟಕ ಮೂಲಕ ಅರಬ್ಬೀ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು ಮತ್ತು ನಾಳೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ.