ವಿಜಯನಗರ: ಜಿಲ್ಲೆಯ ಪ್ರಸಿದ್ಧ ಸುಕ್ಷೇತ್ರ ಶ್ರೀಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿ ಹೊರ ಬಿದ್ದಿದೆ. ಸಂಪಾದಿತಲೇ ಪರಾಕ್ ಎಂಬುದಾಗಿ ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿಯನ್ನು ನುಡಿದ್ದಾರೆ.
ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿನ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಿತು. ಇಂತಹ ಸಂದರ್ಭದಲ್ಲಿ ಗೊರವಯ್ಯ ರಾಮಣ್ಣ ಅವರು ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ. ಅದೇ ಸಂಪಾದಿತಲೇ ಪರಾಕ್ ಎಂಬುದಾಗಿದೆ.
ಗೊರವಯ್ಯನ ಕಾರ್ಣಿಕ ನುಡಿ ಸಂಪಾದಿತಲೇ ಪರಾಕ್ ಎಂಬುದನ್ನು ವಿಶ್ಲೇಷಿಸಿ ಹೇಳಿರುವಂತ ಜನರು ಈ ಸಲ ಭಾರೀ ಮಳೆ, ಬೆಳೆ ಚೆನ್ನಾಗಿ ಆಗಿ, ರೈತರ ಬಾಳು ಹಸನಾಗಲಿದೆ ಎಂಬುದಾಗಿ ತಿಳಿಸಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಈ ಬಾರಿಯಂತೆ ಬರಗಾಲ ಕಡಿಮೆಯಾಗಲಿದೆ. ಮಳೆ ಬೆಳೆ ಚೆನ್ನಾಗಿ ಆಗಲಿದೆ. ಸುಭಿಕ್ಷೆಯಿಂದ ರೈತರು ಸಂತಸ ಪಡಲಿದ್ದಾರೆ ಎಂಬುದಾಗಿ ಕಾರ್ಣಿಕ ನುಡಿಯ ಅರ್ಥವಾಗಿದೆ.
ಶಿವಮೊಗ್ಗ: ಫೆ.28ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ನಾಳೆ ‘ರಾಜ್ಯಸಭಾ ಚುನಾವಣೆ’ ಹಿನ್ನಲೆ: ಇಂದಿನಿಂದ ಫೆ.28ರವರೆಗೆ ‘ವಿಧಾನಸೌಧ’ದ ಸುತ್ತ ‘ನಿಷೇಧಾಜ್ಞೆ’ ಜಾರಿ