ಬೆಂಗಳೂರು : ಕೆಜಿಎಫ್ ಬಾಬು ಕುಟುಂಬಕ್ಕೆ ಇದೀಗ ಮತ್ತೊಮ್ಮೆ ಇಡಿ ಶಾಕ್ ನೀಡಿದ್ದು, ಕೆಜಿಎಫ್ ಬಾಬು ಪತ್ನಿಗೆ ಸೋಮವಾರ ಆಗಸ್ಟ್ 1ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಲಾಗಿದೆ.
ಕೆಜಿಎಫ್ ಬಾಬು ಕುಟುಂಬ ಸಮೇತ ದೆಹಲಿಗೆ ಬಂದಿದ್ದಾರೆ. ನಾನು ಎಂಎಲ್ಸಿ ಚುನಾವಣೆಗೆ ನಿಂತಿದ್ದೇ ತಪ್ಪಾಯ್ತು.ಇದನ್ನೇ ಸವಾಲಾಗಿ ತೆಗೆದುಕೊಂಡು ಚುನಾವಣೆಗೆ ಸ್ಪರ್ಧಿಸ್ತೇನೆ. ಚಿಕ್ಕಪೇಟೆಯಲ್ಲಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. 50 ಸಾವಿರ ಕುಟುಂಬಗಳಿಗೆ 5 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಬಾಬು ಮಾಧ್ಯಮಗಳಿಗೆ ತಿಳಿಸಿದ್ದಾರೆ.