ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಇಡಿ ಅಧಿಕಾರಿಗಳು ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ.
BIGG NEWS: ಕಟೀಲು ದೇವಸ್ಥಾನಕ್ಕೂ ತಟ್ಟಿದ ಶಬ್ದ ಮಾಲಿನ್ಯದ ಬಿಸಿ: ರಾತ್ರಿ 10ರ ನಂತರ ಯಕ್ಷಗಾನಕ್ಕೆ ಬ್ರೇಕ್
ಈ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್, ನನಗೆ ಮತ್ತು ನನ್ನ ಸಹೋದರ ಡಿ.ಕೆ ಸುರೇಶ್ ಇಬ್ಬರಿಗೂ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಹೀಗಾಗಿ ನಾವು ಹೋಗಿ ಇಡಿ ಅಧಿಕಾರಿಗಳ ಪ್ರಶ್ನೆಗೆಳಿಗೆ ಉತ್ತರ ನೀಡಿ ಬಂದಿದ್ದೇವೆ. ಆದರೆ ಇದೀಗ ಮತ್ತೆ ಅಧಿಕಾರಿಗಳಿಂದ ನೋಟಿಸ್ ಬಂದಿದೆ ಎಂದರು.
ಇಡಿ ಅಧಿಕಾರಿಗಳಿಗೆ ಇನ್ನೂ ಹಲವು ದಾಖಲೆಗಳನ್ನು ಕಳುಹಿಸುತ್ತೇವೆ. ಒಂದೇ ವಿಚಾರಕ್ಕೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಾಗಾಗಿ ನಾನು ಹೈಕೋರ್ಟ್ ಅರಿ ಸಲ್ಲಿಸಿದ್ದೇನೆ. ಯಾಕೆ ಪದೇ ಪದೇ ಕರೆದುಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದರು.