ಉಗಾಂಡಾ: ಉಗಾಂಡಾದಲ್ಲಿ ಮಾರಣಾಂತಿಕ ಎಬೋಲಾ ವೈರಸ್ನ ಅಪಾಯವು ಗಮನಾರ್ಹವಾಗಿ ಹೆಚ್ಚಾಗಿದೆ. ಎಬೋಲಾ ವೈರಸ್ ವೇಗವಾಗಿ ಹರಡುತ್ತಿದ್ದು, ಎಬೋಲಾದಿಂದ ಒಬ್ಬ ರೋಗಿ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ಸರ್ಕಾರ ದೃಢೀಕರಿಸಿದೆ.
ಮೃತ ರೋಗಿಯು ಮುಬೆಂಡೆ ಜಿಲ್ಲೆಯ ಮಡುಡು ಉಪ ಕೌಂಟಿಯ ನಾಗಬಾನೊ ಗ್ರಾಮದ ನಿವಾಸಿಯಾಗಿದ್ದು, ಎಬೋಲಾ ರೋಗಲಕ್ಷಣಗಳು ಕಂಡು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಏಕಾಏಕಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಹಾಗೂ ಸಮುದಾಯ ಜಾಗೃತಿಯನ್ನು ಹೆಚ್ಚಿಸಲು ರಕ್ಷಣಾ ತಂಡಗಳನ್ನು ಮುಬೆಂಡೆ ಜಿಲ್ಲೆಗೆ ಕಳುಹಿಸಲಾಗಿದೆ. ರೋಗದ ಸಂಪರ್ಕ ಪತ್ತೆ ಹಚ್ಚುವಿಕೆ ಮತ್ತು ಪ್ರಕರಣ ನಿರ್ವಹಣೆಯಲ್ಲಿ ಮಾಡಲು ಮುಬೆಂಡೆ ಜಿಲ್ಲೆಗೆ ತಂಡವನ್ನು ಕಳುಹಿಸಲಾಗಿದೆ. ರೋಗಕ್ಕೆ ಭಯ ಪಡದೆ ಜನರು ಜಾಗರೂಕರಾಗಿರಿ ಮತ್ತು ಶಾಂತವಾಗಿರುವಂತೆ ಅಲ್ಲಿನ ಉಗಾಂಡಾದ ಆರೋಗ್ಯ ಸಚಿವಾಲಯದ ಮನವಿ ಮಾಡಿದೆ.
ಉಗಾಂಡಾದಲ್ಲಿ ಎಬೋಲಾ ಏಕಾಏಕಿ ಹೆಚ್ಚಳ
ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಂಗಳವಾರ ಉಗಾಂಡಾದಲ್ಲಿ ಎಬೋಲಾ ಏಕಾಏಕಿ ಪ್ರಕರಣವನ್ನು ದೃಢಪಡಿಸಿದ ನಂತರ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವಾಲಯದ ಖಾಯಂ ಕಾರ್ಯದರ್ಶಿ ಡಯಾನಾ ಅಟ್ವಿನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಎಬೋಲಾ ಏಕಾಏಕಿ ಹೆಚ್ಚಾಗುತ್ತಿದೆ ಎಂದು ನಾವು ದೇಶಕ್ಕೆ ತಿಳಿಸಲು ಬಯಸುತ್ತೇವೆ ಎಂದಿದ್ದಾರೆ.
ಎಬೋಲಾ ಸೋಂಕಿತ ರೋಗಿಯ ಲಕ್ಷಣಗಳೇನು?
ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಅಟ್ವಿನ್ ಮಾತನಾಡಿ, ಎಬೋಲಾ ಸೋಂಕಿಗೆ ಒಳಗಾದ ರೋಗಿಯಲ್ಲಿ ತೀವ್ರ ಜ್ವರ, ಭೇದಿ ಮತ್ತು ಹೊಟ್ಟೆ ನೋವು ಮತ್ತು ರಕ್ತ ವಾಂತಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ರೋಗಿಗೆ ಮಲೇರಿಯಾ ಚಿಕಿತ್ಸೆ ನೀಡಲಾಗುತ್ತದೆ. ಪ್ರಸ್ತುತ ಎಂಟು ಶಂಕಿತ ಪ್ರಕರಣಗಳಿದ್ದು, ಎಂದು ವಿಶ್ವ ಆರೋಗ್ಯ ಸಂಸ್ಥೆ ಆಫ್ರಿಕಾ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.