ಕಂಪಾಲಾ: ಉಗಾಂಡಾದಲ್ಲಿ ಎಬೋಲಾ(Ebola)ದಿಂದ ಐದು ಮಂದಿ ಸಾವನ್ನಪ್ಪಿದ್ದು, ಇನ್ನೂ 19 ಸಾವುಗಳು ಈ ಕಾಯಿಲೆಯಿಂದಲೇ ಉಂಟಾಗಿರಬಹುದು ಎಂದು ಅಧ್ಯಕ್ಷ ಬುಧವಾರ ಹೇಳಿದ್ದಾರೆ.
COVID-19 ಗಿಂತ ಎಬೋಲಾವನ್ನು ನಿರ್ವಹಿಸಲು ಸುಲಭವಾಗಿರುವುದರಿಂದ ಲಾಕ್ಡೌನ್ಗೆ ಆದೇಶಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಉಗಾಂಡಾದಲ್ಲಿ ಮಾರಣಾಂತಿಕ ʻಹೆಮರಾಜಿಕ್ ಜ್ವರʼ ಏಕಾಏಕಿ ಕಾಣಿಸಿಕೊಂಡಿದೆ. ಇದು 45 ಮಿಲಿಯನ್ ಜನ ಸಂಖ್ಯೆಯಿರುವ ದೇಶದಲ್ಲಿ ಪ್ರಮುಖ ಆರೋಗ್ಯ ಬಿಕ್ಕಟ್ಟಿನ ಭಯವನ್ನು ಉಂಟುಮಾಡುತ್ತದೆ. ಈ ಎಬೊಲಾ ಕಾಯಿಲೆಗೆ ಯಾವುದೇ ಲಸಿಕೆ ಇಲ್ಲ ಎಂದು ದೂರದರ್ಶನದ ಭಾಷಣದಲ್ಲಿ ಅಧ್ಯಕ್ಷ ಯೊವೆರಿ ಮುಸೆವೆನಿ ಅವರು ಮಾಹಿತಿ ನೀಡಿದ್ದಾರೆ.
ಸಮುದಾಯದಲ್ಲಿ ಇನ್ನೂ 19 ಮಂದಿ ಸಾವನ್ನಪ್ಪಿದ್ದು, ಅವರು ಎಬೊಲಾದಿಂದಲೇ ಸಾವನ್ನಪ್ಪಿದ್ದಾರೆಯೇ ಎಂಬುದು ದೃಢವಾಗಿಲ್ಲ. ಇನ್ನೂ, 19 ಮಂದಿಯಲ್ಲಿ ಎಬೊಲಾ ಸೋಂಕು ದೃಢವಾಗಿದೆ. ಅವರಲ್ಲಿ ನಾಲ್ವರು ವೈದ್ಯರು, ಒಬ್ಬ ಅರಿವಳಿಕೆ ತಜ್ಞರು ಮತ್ತು ಒಬ್ಬ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಆರು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ಅವರು ಹೇಳಿದರು.
ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಿ. ಯಾವುದೇ ವ್ಯಕ್ತಿಯಿಂದ ಸಂಪರ್ಕವನ್ನು ತಪ್ಪಿಸಿ ಎಂದು ಮುಸೆವೆನಿ ಮನವಿ ಮಾಡಿದ್ದಾರೆ.
SHOCKING NEWS: ಪಂಜಾಬ್ನಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ: ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
SHOCKING NEWS: ಪಂಜಾಬ್ನಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ: ನೆಲದ ಮೇಲೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ