ಕೆಎನ್ ಎನ್ ನ್ಯೂಸ್ ಡೆಸ್ಕ್ : ಕಾಡಿನಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಎಷ್ಟು ಪ್ರಯೋಜನಾಕಾರಿಯಾಗಿದೆ. ಅದರಲ್ಲೂ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಆರೋಗ್ಯ ಉತ್ತಮವಾಗಿದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಚಿನ್ನದ ಬೆಲೆ ಭಾರೀ ಇಳಿಕೆ, 7 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಚಳಿಗಾಲ ಬಂತು ಅಂದರೆ ಸಾಕು ನೆಲ್ಲಿಕಾಯಿ ಬೇಕಾದಷ್ಟು ಸಿಗುತ್ತದೆ. ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಮ್ಲವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಟ್ಯಾನಿನ್, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ. ಈ ಪದಾರ್ಥಗಳು ಕೂದಲಿಗೆ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿ ತಿನ್ನುವುದು ಅಥವಾ ಇದರ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನೆ ಸಿಗುತ್ತದೆ.
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಚಿನ್ನದ ಬೆಲೆ ಭಾರೀ ಇಳಿಕೆ, 7 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ
ಹೃದಯಕ್ಕೆ ಬೆಟ್ಟದ ನೆಲ್ಲಿ ತುಂಬಾ ಉಯೋಗಕಾರಿ : ಫೈಬರ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿರುವ ಬೆಟ್ಟದ ನೆಲ್ಲಿಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆಯಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹ ನಿಯಂತ್ರಿಸುತ್ತೆ : ಅಧಿಕ ರಕ್ತದೊತ್ತಡ, ಸಕ್ಕರೆ ಮತ್ತು ಆಕ್ಸಿಡೀಕರಣದ ಲಕ್ಷಣಗಳಿಂದ ದೇಹವನ್ನು ರಕ್ಷಿಸುವ ಕೆಲವು ಗುಣಲಕ್ಷಣಗಳನ್ನು ಬೆಟ್ಟದ ನೆಲ್ಲಿ ಹೊಂದಿದೆ. ಇದರ ಬಳಕೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಪುರುಷರಿಗೆ ಪ್ರಯೋಜನಕಾರಿ: ಬೆಟ್ಟದ ನಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ಪುರುಷರಲ್ಲಿ ಕಡಿಮೆ ಇರುವ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರ ಸೇವನೆಯು ಕೆಲಸದ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ.
ಮೃದು ತ್ವಚೆಗೆ ಸಹಕಾರಿ : ಖಾಲಿ ಹೊಟ್ಟೆಯಲ್ಲಿ ತಿಂದರೆ ಕಾಲಜನ್ ಡಿಗ್ರ್ಯಾಡೇಡನ್ನು ಕಡಿಮೆ ಮಾಡುವ ಗುಣ ಬೆಟ್ಟದ ನೆಲ್ಲಿಕಾಯಿಯಲ್ಲಿ ಇದೆ. ಈ ಸಾರವು ಕಾಲಜನ್ ಉತ್ಪಾದನೆಗೆ ಅಗತ್ಯವಾದ ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ಯೌವನವಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುವ ಕಾಯಿಯಾಗಿದೆ.