ಕೆಎನ್ ಎನ್ ನ್ಯೂಸ್ ಡೆಸ್ಕ್ : ಚಳಿಗಾಲದಲ್ಲಿ ಬಿಸಿ ಬಿಸಿ ತಿನ್ನೊಣ ಅಂದುಕೊಳ್ಳುತ್ತಾರೆ. ಸ್ವಲ್ಪ ಸಮಯ ಬಿಟ್ಟರೆ ತಿಂಡಿ ತಣ್ಣಾಗಾತ್ತದೆ. ಇಲ್ಲ ಅನೇಕ ಬಾರಿ ಊಟದ ಸಮಯಕ್ಕೆ ಬಿಸಿ ಅಡುಗೆ ಮಾಡಲು ಸಾಧ್ಯವಾಗದೇ ಮುಂಚೆಯೇ ಮಾಡಿ ಇಡುತ್ತೇವೆ.
ಅನೇಕ ಮನೆಗಳಲ್ಲಿ, ಆಹಾರವನ್ನು ಮತ್ತೆ ಬಿಸಿಮಾಡುವುದನ್ನು ನಾವು ನೋಡುತ್ತೇವೆ, ಇಲ್ಲವೇ ಮಾಡುತ್ತೇವೆ ಕೂಡ . ನಾವು ಸಾಮಾನ್ಯವಾಗಿ ಉಳಿದ ಊಟವನ್ನು ಪದೇ ಪದೇ ಬಿಸಿ ಮಾಡುತ್ತೇವೆ ಕೂಡ. ಆದರೆ ಆಹಾರವನ್ನು ಹೀಗೆ ಪದೇ ಪದೇ ಬಿಸಿ ಮಡುವುದು ಎಂದಿಗೂ ಸ್ವೀಕಾರಾರ್ಹ ಅಭ್ಯಾಸವಲ್ಲ ಆಹಾರದ ಸುರಕ್ಷತೆಯು ಅದರ ತೇವಾಂಶ, ಶೇಖರಣಾ ತಾಪಮಾನ ಮತ್ತು ಶೇಖರಣಾ ಸಮಯದಿಂದ ಪ್ರಭಾವಿತವಾಗಿರುತ್ತದೆ. ನೀವು ಆಹಾರವನ್ನು ಹೇಗೆ ಬಿಸಿಮಾಡುತ್ತೀರಿ ಎಂಬುದು ನಿರ್ಣಾಯಕವಾದ ಮತ್ತೊಂದು ಅಂಶವಾಗಿದೆ. ಆಹಾರದ ಕ್ಷೀಣಿಸುವಿಕೆಯು ಅಸಮರ್ಪಕವಾಗಿ ಬಿಸಿಮಾಡುವಿಕೆಯಿಂದ ಉಂಟಾಗಬಹುದು. ಆಹಾರವನ್ನು ಸರಿಯಾಗಿ ಬಿಸಿಮಾಡಲು, ನೀವು ಸರಿಯಾದ ವಿಧಾನವನ್ನು ಬಳಸಬೇಕು.
ಪ್ರತಿ ಊಟಕ್ಕೂ ತಾಜಾ ಆಹಾರವನ್ನು ಬೇಯಿಸಲು ಸಮಯದ ನಿರ್ಬಂಧದ ಕಾರಣದಿಂದಾಗಿ ಕೆಲವೊಮ್ಮೆ ನಾವು ಅದನ್ನು ಮಾಡುತ್ತೇವೆ ಮತ್ತು ನಾವು ಉಳಿದಿರುವ ದಿನಗಳು ಇವೆ. ಏನೇ ಇರಲಿ, ಆಹಾರವನ್ನು ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ ಏಕೆಂದರೆ ಮತ್ತೆ ಬಿಸಿ ಮಾಡುವುದರಿಂದ ಆಹಾರದಲ್ಲಿನ ರಾಸಾಯನಿಕ ಬದಲಾವಣೆಯು ಆಹಾರ ವಿಷ ಮತ್ತು ಆಹಾರದಿಂದ ಹರಡುವ ರೋಗಗಳಿಗೆ ಕಾರಣವಾಗುತ್ತದೆ. ನೀವು ಪ್ರತಿ ಬಾರಿ ಆಹಾರವನ್ನು ಮತ್ತೆ ಬಿಸಿ ಮಾಡಿದಾಗ ಏನಾಗುತ್ತದೆ ಗೊತ್ತಾ?
ಈ ಹಿನ್ನೆಲೆ ಊಟ ಮಾಡುವಾಗ ಬಿಸಿಯಾಗಿರುವ ಅಡುಗೆ ತಿನ್ನುವ ಇಚ್ಛೆಯಿಂದ ಅದನ್ನು ಮತ್ತೆ ಮತ್ತೆ ಬಿಸಿ ಮಾಡುತ್ತೇವೆ. ಆದರೆ, ಈ ರೀತಿ ಪದೇ ಪದೇ ಬಿಸಿ ಮಾಡುವುದು ಅಪಾಯ ಎನ್ನುತ್ತಾರೆ ಪೌಷ್ಟಿಕ ತಜ್ಞರು.ಒಮ್ಮೆ ಅನ್ನವನ್ನು ಮಾಡಿ, ಉಳಿದಾಗ ಅದೇ ಪಾತ್ರೆಯಲ್ಲಿ ಮತ್ತೆ ಬಿಸಿ ಮಾಡುತ್ತೇವೆ. ಬೆಂದ ಅನ್ನವನ್ನು ಪದೇ ಪದೇ ಬಿಸಿ ಮಾಡಿ ತಿನ್ನುವ ಅಭ್ಯಾಸ ನಿಮಗೆ ಇದ್ದರೆ, ಅದನ್ನು ಮಾಡಬೇಡಿ. ಈ ವೇಳೆ ಬ್ಯಾಕ್ಟೀರಿಯಾ ವಿಷಕಾರಿಯಾದ ಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಜೊತೆಗೆ ಇದರಲ್ಲಿನ ಪೋಷಕಾಂಶಗಳು ಸಾಯುತ್ತವೆ.ಹಸಿರು ತರಕಾರಿ ಮತ್ತು ಕ್ಯಾರೆಟ್ ಅನ್ನು ಸರಿಯಾಗಿ ಬೇಯಿಸದೇ ಮತ್ತೆ ಎರಡನೇ ಬಾರಿ ಅದನ್ನು ಬಿಸಿ ಮಾಡಿದರೆ, ಅದರಲ್ಲಿನ ಐರನ್, ಪೌಷ್ಟಿಕಾಂಶಗಳು ನಾಶವಾಗುತ್ತವೆ.
ಇದರಿಂದ ನಮ್ಮ ದೇಹಕ್ಕೆ ಯಾವುದೇ ಪ್ರಯೋಜನ ಸಿಗುವುದಿಲ್ಲ. ಇದರಲ್ಲಿ ಬಿಡುಗಡೆಯಾಗುವ ಕಾರ್ಸಿನೋಜೆನಿಕ್ ಕ್ಯಾನ್ಸರ್ಗೆ ಕಾರಣವಾಗಬಹುದು. ಅಗತ್ಯವಿದ್ದರೆ, ನೀವು ಚೆನ್ನಾಗಿ ಕುದಿಸಿದ ನೀರಿನ ಪಾತ್ರೆಗೆ ತರಕಾರಿ ಹಾಕಿ, ಅದು ಬಿಸಿಯಾದ ಬಳಿಕ ಸೇವಿಸಬಹುದು.
ಮೊಟ್ಟೆಯನ್ನು ಕೂಡ ಬೇಯಿಸಿದ ತಕ್ಷಣಕ್ಕೆ ತಿನ್ನಬೇಕು. ಅದನ್ನು ಯಾವುದೇ ಕಾರಣಕ್ಕೆ ಹಾಗೇ ತುಂಬಾ ಸಮಯ ಬಿಡಬಾರದು. ತಕ್ಷಣಕ್ಕೆ ಅದನ್ನು ತಿನ್ನಲು ಸಾಧ್ಯವಾಗಲಿಲ್ಲ ಎಂದರೆ, ಅದರಲ್ಲಿನ ಪೋಷಕಾಂಶಗಳು ನಿಮಗೆ ಸಿಗುವುದಿಲ್ಲ. ಮೊಟ್ಟೆಯನ್ನು ಬೇಯಿಸಿ ಬಹಳ ಕಾಲ ಹಾಗೇ ಬಿಟ್ಟರೆ ಅದರಲ್ಲಿ ಯಥೇಚ್ಛವಾಗಿರುವ ನೈಟ್ರೋಜನ್ ಕ್ಯಾನ್ಸರ್ಕಾರಕ ಅಂಶ ಬಿಡುಗಡೆ ಮಾಡುತ್ತದೆ. ಅದೇ ರೀತಿ ಚಿಕನ್ ಅನ್ನು ಕೂಡ ಎರಡನೇ ಬಾರಿಗೆ ಬಿಸಿ ಮಾಡಿದರೆ, ಅದರಲ್ಲಿನ ಪ್ರೋಟಿನ್ ನಾಶವಾಗುತ್ತದೆ.