ಕೆ ಎನ್ ಎನ್ ನ್ಯೂಸ್ ಡೆಸ್ಕ್ : ಡ್ರೈಫ್ರೂಟ್ ಅಂದು ಕ್ಷಣವೇ ಎಲ್ಲರ ಬಾಯಿನಲ್ಲಿ ನೀರು ಬರೋದು ಗೋಡಂಬಿ, ದ್ರಾಕ್ಷಿ, ಖರ್ಜುರ. ಊಟ ತಿಂಡಿ ನಡುವೆ ಕೆಲವೊಬ್ಬರು ಆಗಾಗ ಇದನ್ನು ತಿನ್ನುತ್ತಾರೆ. ಇದು ಬಾಯಿಗೆ ರುಚಿ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗೂ ಒಳ್ಳೆಯದು. ಮಲಬದ್ಧತೆ, ಕಿಬ್ಬೊಟ್ಟೆಯ ಕ್ಯಾನ್ಸರ್ ಮತ್ತು ಅತಿಸಾರ ಸೇರಿದಂತೆ ಕೆಲವು ಅನಾರೋಗ್ಯ ಸಮಸ್ಯೆಗೆ ಖರ್ಜೂರವನ್ನು ಮನೆಮದ್ದಾಗಿ ಬಳಸಲಾಗುತ್ತದೆ.
ಇನ್ನು ಮೂಳೆ, ಮೆದುಳಿನ ಆರೋಗ್ಯ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ನೈಸರ್ಗಿಕ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ಇದು ಕ್ಯಾನ್ಸರ್ ನಿರೋಧಕ, ಆಂಟಿ ಡಯಾಬಿಟಿಕ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳನ್ನು ಒಳಗೊಂಡಿದ್ದು, ಆರೋಗ್ಯಸುಧೆಯಾಗಿ ಬಳಕೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ರೆ ಆ ಪ್ರಯೋಜನ ತಿಳಿದುಕೊಳ್ಳೊಣ
ಮೆದುಳಿನ ಆರೋಗ್ಯ ವೃದ್ಧಿಸುತ್ತೆ
ಖರ್ಜೂರದ ಹಣ್ಣಿನಲ್ಲಿ ನೈಸರ್ಗಿಕ ಜೀವಸತ್ವಗಳು, ಅಗತ್ಯ ಅಮೈನೋ ಆಮ್ಲಗಳು ಮತ್ತು ಖನಿಜ ಹೇರಳವಾಗಿದೆ. ಇದು ನಿಮ್ಮ ಮೆದುಳಿನ ಕೋಶಗಳ ಆರೋಗ್ಯವನ್ನು ಉತ್ತೇಜಿಸಲು ಮತ್ತು ಸಮರ್ಪಕವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಸಿಯಮ್ ಅಂಶಗಳು ನಿಮ್ಮ ನರಮಂಡಲವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ
ಖರ್ಜೂರವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಿಸುವುದನ್ನು ತಡೆಯುವಲ್ಲಿ ಖರ್ಜೂರ ಅತ್ಯಗತ್ಯ ಎಂದು ಈ ಹಿಂದೆ ನಡೆದ ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.
ತ್ವಚೆಯ ಆರೋಗ್ಯ ಸುಧಾರಿಸುತ್ತದೆ
ಖರ್ಜೂರದಲ್ಲಿ ವಿಟಮಿನ್ ಸಿ, ಬಿ5, ಫ್ಲೇವನಾಯ್ಡ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳಂತಹ ಹಲವಾರು ಪೌಷ್ಟಿಕಾಂಶಗಳಿವೆ. ಈ ಎಲ್ಲಾ ಅಗತ್ಯ ಅಂಶಗಳು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ. ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್ಗಳು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ. ಇದರಿಂದಾಗಿ ನಿಮ್ಮ ಚರ್ಮದ ಮೇಲೆ, ವಿಶೇಷವಾಗಿ ಮುಖದಲ್ಲಿ ಸುಕ್ಕುಗಳು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಕೂದಲಿನ ಆರೋಗ್ಯ
ಖರ್ಜೂರದಲ್ಲಿ ವಿಟಮಿನ್ ಬಿ5 ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಯಥೇಚ್ಛವಾಗಿದೆ. ಇದು ಕೂದಲಿನ ಬೆಳವಣಿಗೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ. ಖರ್ಜೂರವು ನಿಮ್ಮ ನೆತ್ತಿಯ ಮೇಲೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ತಲೆಹೊಟ್ಟು ನಿವಾರಣೆ, ಕೂದಲು ಉದುರುವಿಕೆ ಸೇರಿದಂತೆ ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.