ಕೆಎನ್ ಎನ್ ನ್ಯೂಸ್ ಡೆಸ್ಕ್ : ಡಾರ್ಕ್ ಚಾಕೋಲೇಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇವುಗಳನ್ನು ತಿಂದರೆ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚಿನವರು ಅವುಗಳನ್ನು ತಿನ್ನುತ್ತಾರೆ. ಇದನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚುತ್ತದೆ ಎಂಬ ಅಭಿಪ್ರಾಯ ಕೂಡಾ ಇರುವುದರಿಂದ ತೆಳ್ಳಗಿರುವ ಕೆಲವೊಬ್ಬರು ಇದನ್ನು ಇಷ್ಟವಿಲ್ಲದಿದ್ದರೂ ತಿನ್ನುತ್ತಾರೆ.
ಆದರೆ ಡಾರ್ಕ್ ಚಾಕೋಲೇಟ್ನಷ್ಟು ಬಿಳಿ ಚಾಕೊಲೇಟ್ ಜನಪ್ರಿಯವಾಗಿಲ್ಲ. ಬಿಳಿ ಚಾಕೋಲೇಟ್ ಕೂಡಾ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಹೀಗಾಗಿ ಮಕ್ಕಳಿಗೆ ಡಾರ್ಕ್ ಚಾಕೊಲೇಟ್ ಮಾತ್ರವಲ್ಲದೆ, ಸಾಂದರ್ಭಿಕವಾಗಿ ಬಿಳಿ ಚಾಕೊಲೇಟ್ ಕೂಡಾ ತಿನ್ನಲು ನೀಡಬೇಕು.
ಕ್ಯಾಲ್ಸಿಯಂ ಹೆಚ್ಚಿಸುತ್ತದೆ
ಬಿಳಿ ಚಾಕೊಲೇಟ್ನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ. ನರಗಳು, ಹೃದಯ ಮತ್ತು ಸ್ನಾಯುಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
ಜ್ಞಾಪಕಶಕ್ತಿ ವೃದ್ಧಿ
ವೈಟ್ ಚಾಕೊಲೇಟ್ ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ. ಇದು ಮೆದುಳು ಸಂಬಂಧಿತ ಅನೇಕ ಅಸ್ವಸ್ಥತೆಗಳ ವಿರುದ್ಧ ಹೋರಾಡುತ್ತದೆ. ಹೀಗಾಗಿ ನಿಮ್ಮ ಮರೆವಿನ ಸಮಸ್ಯೆ ಕಡಿಮೆಯಾಗುತ್ತದೆ. ಬಿಳಿ ಚಾಕೊಲೇಟ್ ತಿನ್ನುವುದು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಜ್ಞಾಪಕಶಕ್ತಿಯನ್ನು ಸುಧಾರಿಸುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣ
ವೈಟ್ ಚಾಕೋಲೇಟ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದನ್ನು ತಡೆಯುತ್ತದೆ. ಅನಗತ್ಯ ಕೊಬ್ಬು ಶೇಖರಣೆಯಿಂದ ಹೃದಯ ಸಂಬಂಧಿ ಸಮಸ್ಯೆ ಹೆಚ್ಚುತ್ತದೆ. ಆದರೆ ಬಿಳಿ ಚಾಕೊಲೇಟ್ ಅವುಗಳಿಂದ ಹೃದಯವನ್ನು ರಕ್ಷಿಸುತ್ತದೆ.
ಸ್ತನ ಕ್ಯಾನ್ಸರ್
ಮಹಿಳೆಯರು ಸಾಂದರ್ಭಿಕವಾಗಿ ಬಿಳಿ ಚಾಕೊಲೇಟ್ ಸೇವಿಸಿದರೆ ಬಹಳಷ್ಟು ಪ್ರಯೋಜನ ಪಡೆಯಬಹುದು. ಇದು ಪಾಲಿಫಿನಾಲ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುತ್ತದೆ.