ಕೆಎನ್ಎನ್ಡಿಜಿಟಲ್ಡೆಸ್ಕ್: ಥೈರಾಯ್ಡ್ ದೇಹದ ಅಂಗಾಗಳಲ್ಲಿ ಇದೂ ಒಂದು. ಇದು ದೇಹದಲ್ಲಿನ ಅತ್ಯಂತ ಸೂಕ್ಷ್ಮ ಗ್ರಂಥೀಯಾಗಿದ್ದು, ಈ ಸೂಕ್ಷ್ಮ ಗ್ರಂಥಿಗಳಲ್ಲಿ ಚೂರು ಏರು ಪೇರಾದರೂ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಈಗಿನ ಕಲುಷಿತ ವಾತಾವರಣ ಹಾಗು ಅಸಮರ್ಪಕ ಜೀವನಶೈಲಿಯಿಂದ ಥೈರಾಯ್ಡ್ ಸಮಸ್ಯೆ ಅನೇಕರಲ್ಲಿ ಶುರುವಾಗುತ್ತಿದೆ. ಚಿಕ್ಕಮಕ್ಕಳಿಗೂ ಈ ಸಮಸ್ಯೆ ಬಿಟ್ಟಿಲ್ಲ.
ಪೌಷ್ಟಿಕಯುಕ್ತ ಆರೋಗ್ಯವಾದ ಆಹಾರ ಸೇವನೆ. ಸಮರ್ಪಕ ಜೀವನಶೈಲಿಯಿಂದ ಈ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು. ಇದರ ಜೊತೆ ಜೊತೆಗೆ ಆರ್ಯುವೇದ ತಜ್ಞರು ಈ ಥೈರಾಯ್ಡ್ ಸಮಸ್ಯೆ ಬರದಂತೆ ಕೆಲ ಸಲಹೆಗಳನ್ನು ನೀಡುತ್ತಾರೆ. ಅದೇನೆಂದರೆ ತೆಂಗಿನಕಾಯಿಯನ್ನು ಹೆಚ್ಚು ಹೆಚ್ಚು ಸೇವನೆ ಮಾಡಿದರೆ ಥೈರಾಯ್ಡ್ ನಂತಹ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹೇಳುತ್ತಾರೆ.
ತಜ್ಞರು ಹೇಳುವ ಪ್ರಕಾರ ತೆಂಗಿನ ಕಾಯಿಯನ್ನು ಯಾವ ರೂಪದಲ್ಲಾದರೂ ಸೇವಿಸಬಹುದು. ನಿತ್ಯವೂ ಅಡುಗೆಯಲ್ಲಿ ತೆಂಗಿನ ಕಾಯಿಯನ್ನು ಬಳಸಬಹುದು. ಅಥವಾ ಪ್ರತೀ ದಿನ ತೆಂಗಿನಕಾಯಿ ನೀರು ಕುಡಿಯುವುದು. ಅಥವಾ ತೆಂಗಿನ ಹಾಲನ್ನು ತೆಗೆದು ಅದರಿಂದ ಸಿಹಿ ಪದಾರ್ಥ ಮಾಡಿ ಆಗಾಗ ತಿನ್ನಬಹುದು. ಅಡುಗೆ ಮಾಡುವಾಗ ಎಣ್ಣೆಯ ಆಯ್ಕೆಯಲ್ಲಿ ತೆಂಗಿನಕಾಯಿ ಎಣ್ಣೆಯನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಉತ್ತಮ.
ಥೈರಾಯ್ಡ್ ಸಮಸ್ಯೆ ಇದ್ದರೆ ಆಗಾಗ ಬೆಲ್ಲದಿಂದ ಮಾಡಿದ ಕೊಬ್ಬರಿ ಮಿಠಾಯಿ ಸೇವಿಸಲು ಅಡ್ಡಿಯಿಲ್ಲವಂತೆ. ಹೀಗೆ ಈಗಾಗಲೇ ಥೈರಾಯ್ಡ್ ಸಮಸ್ಯೆ ಇದ್ದವರು ನಿತ್ಯದ ಆಹಾರದಲ್ಲಿ ತೆಂಗಿನಕಾಯಿ ಇರುವಂತೆ ನೋಡಿಕೊಂಡು ಈ ಸಮಸ್ಯೆಯಿಂದ ಪಾರಾಗಬಹುದು. ಅಥವಾ ಆಗಾಗ ತೆಂಗಿನಕಾಯಿಯನ್ನು ಬೇರೆ ಬೇರೆ ರೂಪದಲ್ಲಿ ಸೇವಿಸಿ ಥೈರಾಯ್ಡ್ ಬರದಂತೆ ಸಹ ನೋಡಿಕೊಳ್ಳಬಹುದು.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.