ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇಂದು ಮಧ್ಯಾಹ್ನ 2.04 ರ ಸುಮಾರಿಗೆ ಜನರಿಗೆ ಲಘು ಭೂಕಂಪನದ ಅನುಭವವಾಗಿದೆ.
ಇಂದು ಮಧ್ಯಾಹ್ನ 2.04 ರ ಸುಮಾರಿಗೆ ಭೂಮಿಯಿಂದ ಶಬ್ದ ಕೇಳಿ ಬಂದಿದೆ ಎನ್ನಲಾಗಿದೆ. ಈ ವೇಳೆ ಗ್ರಾಮದ ಜನರಿಗೆ ಲಘು ಭೂಕಂಪನದ (Earthquake) ಅನುಭವವಾಗಿದೆ. ಇದರಿಂದ ಬೆಚ್ಚಿದ ಜನರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಬಾಬಾನಗರ, ಬಿಜ್ಜರಗಿ,. ಕಳ್ಳಕವಟಗಿ, ಘೋಣಸಗಿ ಗ್ರಾಮದ ಜನರಿಗೆ ಭೂಕಂಪನದ ಅನುಭವವಾಗಿದೆ. ತುಂತುರು ಮಳೆ ನಡುವೆ ಭೂಮಿಯಿಂದ ಶಬ್ದ ಕೇಳಿಬಂತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಯಾವುದೇ ಭೂಕಂಪನ ಸಂಭವಿಸಿಲ್ಲ ಎಂದು ವರದಿ ಮಾಡಿದೆ.
BREAKING NEWS : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಸೆ.26 ರಿಂದ 14 ದಿನ ‘ದಸರಾ ರಜೆ’ ಘೋಷಣೆ