ಬೀದರ್: ಜಿಲ್ಲೆಯಲ್ಲಿ 3.0 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಭೂಮಿ ಕಂಪಿಸಿದ ಅನುಭವದಿಂದಾಗಿ ಜನರು ಕೆಲ ಕಾಲ ಭಯಭೀತರಾದಂತ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮುದ್ನಾಳ್ ಗ್ರಾಮದಲ್ಲಿ ಭೂಕಂಪನ ಉಂಟಾಗಿದೆ. ಇದರಿಂದಾಗಿ ಭೂಮಿ ಕಂಪಿಸಿದಂತ ಅನುಭವ ಜನರಿಗೆ ಉಂಟಾಗಿದೆ.
ಭೂಕಂಪನದ ಕೇಂದ್ರಬಿಂದು ಹುಮನಾಬಾದ್ ತಾಲ್ಲೂಕಿನ ಇಟಗಾ ಗ್ರಾಮದಿಂದ ಸುಮಾರು 5.1 ಕಿಲೋಮೀಟರ್ ಪಶ್ಚಿಮದಲ್ಲಿ ಹಾಗೂ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ್ ಗ್ರಾಮದಿಂದ 7.3 ಕಿಲೋಮೀಟರ್ ಪಶ್ಚಿಮದಲ್ಲಿ ಎಂಬುದಾಗಿ ಇಲಾಖೆ ಮಾಹಿತಿ ನೀಡಿದೆ.
ಪುಸ್ತಕ ಪ್ರಿಯರಿಗೆ ಗುಡ್ ನ್ಯೂಸ್: ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಣೆ
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
 
		



 




