ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. ಈ ಪ್ರತಿಭಟನೆಯ ವೇಳೆಯಲ್ಲಿ ಕಿಡಿಗೇಡುಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಡಿವೈಎಸ್ಪಿ ಒಬ್ಬರ ಕೈ ಮುರಿತಗೊಂಡಿದ್ದರೇ, ನಾಲ್ಕು ಬಸ್ಸುಗಳ ಗಾಜು ಪುಡಿಪುಡಿಯಾಗಿದೆ.
ಬೆಳಗಾವಿ ಜಿಲ್ಲೆಯ ಹುತ್ತರಗಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆಯಲ್ಲಿ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದಾಗಿ 4 ಬಸ್ ಗಳ ಗಾಜು ಪುಡಿ ಪುಡಿಯಾಗಿದೆ. ಇದಷ್ಟೇ ಅಲ್ಲವೇ ಪೊಲೀಸ್ ವಾಹನಗಳ ಮೇಲೂ ಉದ್ರಿಕ್ತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಡಿವೈಎಸ್ಪಿ ಸಜ್ಜನ್ ಎಂಬುವರ ಕೈ ಮುರಿತವಾಗಿರೋದಾಗಿ ಹೇಳಲಾಗುತ್ತಿದೆ.
ಇನ್ನೂ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಮೇಲೂ ಹುತ್ತರಗಿಯಲ್ಲಿ ಕಲ್ಲು ತೂರಾಟವನ್ನು ಮಾಡಲಾಗಿದೆ. ಹೀಗಾಗಿ 4 ಕೆ ಎಸ್ ಆರ್ ಟಿಸಿ ಬಸ್ಸುಗಳಿಗೆ ಹಾನಿಯಾಗಿದೆ. ಕೆ ಎಸ್ ಆರ್ ಟಿಸಿ ಬಸ್ಸಿನ ಗಾಜುಗಳು ಪುಡಿ ಪುಡಿಯಾಗಿರುವುದಾಗಿ ತಿಳಿದು ಬಂದಿದೆ.
PAN Card Alert: ಜನವರಿ 1, 2026ರಿಂದ ನಿಮ್ಮ ‘ಪ್ಯಾನ್ ಕಾರ್ಡ್’ ನಿಷ್ಕ್ರಿಯ, ಏಕೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ








