ನವದೆಹಲಿ : 2025 ರ ಏಷ್ಯಾ ಕಪ್ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಪಾಕಿಸ್ತಾನ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ತನ್ನ ಅಂತಿಮ ಗ್ರೂಪ್ ಎ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕ್ರಿಕ್‌ಬಜ್ ಪ್ರಕಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಜೊತೆ “ಮತ್ತಷ್ಟು ಚರ್ಚೆಗಳ” ಅಗತ್ಯವನ್ನು ಉಲ್ಲೇಖಿಸಿ ಪಂದ್ಯಾವಳಿಯ ಆಯೋಜಕರಿಗೆ ಪಂದ್ಯಾವಳಿಯ ಆರಂಭವನ್ನು ಒಂದು ಗಂಟೆ ವಿಳಂಬಗೊಳಿಸುವಂತೆ ಕೇಳಿಕೊಂಡಿದೆ.
ಇದರ ಮಧ್ಯ ಭಾರತದ ಜೊತೆಗಿನ ಪಂದ್ಯದ ವೇಳೆ ಅವಮಾನ ಆರೋಪ ಹಿನ್ನೆಲೆ ಇದೀಗ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನಕ್ಕೆ ಕ್ಷಮೆಯಾಚಿಸಿದ್ದಾರೆ. ಈ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಮೊರೆ ಹೋಗಿತ್ತು. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಜಾಗೊಳಿಸುವಂತೆ ಪಿಸಿಬಿ ಒತ್ತಾಯಿಸಿತ್ತು. UAE ಜೊತೆಗೆ ಆಡಲ್ಲವೆಂದು ಪಾಕಿಸ್ತಾನ ತಂಡ ಪಟ್ಟು ಹಿಡಿದಿತ್ತು. ಹಾಗಾಗಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಕ್ಷಮೆ ಕೊರಿದ್ದು ಈ ಹಿನ್ನೆಲೆ ಪಾಕಿಸ್ತಾನ ಪಂದ್ಯ ಆಡಲು ನಿರ್ಧರಿಸಿದೆ. ಈ ಕುರಿತು ಪಿಸಿಬಿ ಮಾಹಿತಿ ನೀಡಿದೆ