ಚಿತ್ರದುರ್ಗ : ಸೆಪ್ಟೆಂಬರ್ 22 ರಂದು ಆರಂಭವಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆ ವೇಳೆಯಲ್ಲಿ ಜಾತಿ ಮತ್ತು ಉಪಜಾತಿ ಎರಡು ಕಾಲಂಗಳಲ್ಲೂ “ಕಾಡುಗೊಲ್ಲ” ಎಂದು ನಮೂದಿಸಬೇಕೆಂದು ಸಮುದಾಯ ಮುಖಂಡರು ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪುಷ್ಪಾಂಜಲಿ ಟಾಕೀಸ್ ರಸ್ತೆಯಲ್ಲಿರುವ ವಿಲಾಸ್ ಹಾಲ್ ನಲ್ಲಿ ಗುರುವಾರ ಪಕ್ಷತಿತವಾಗಿ ಸಮುದಾಯದ ಮುಖಂಡರು ಪೂರ್ವಭಾವಿ ಸಭೆ ನಡೆಸಿ ಮಾಹಿತಿ ನೀಡಿದರು.
ಈ ಸಮೀಕ್ಷೆಯು ನಮ್ಮ ಸಮಾಜ ಜನಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿಯಲು ಜಾತಿ ಗಣತಿ ಕಾರ್ಯ ಸರ್ಕಾರ ನಡೆಸುತ್ತಿದೆ. ಸಮುದಾಯದ ವಿಚಾರ ಬಂದಾಗ ನಮ್ಮ ತನವನ್ನು ಬಿಟ್ಟುಕೊಡಬಾರದು. ಕಾಡುಗೊಲ್ಲರ ಅಸ್ಮಿತೆಯನ್ನು ಕಾಪಾಡಬೇಕಿದೆ. ಈಗಿರುವಾಗ ನಾವು ಜಾತಿ ಕಾಲಂ ನಲ್ಲಿ ಕಾಡುಗೊಲ್ಲ ಎಂದೇ ನಮೂದಿಸಬೇಕು. ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ಕಾಡುಗೊಲ್ಲ ಎಂದೇ ಬರೆಸಿದಾಗ ಮಾತ್ರ ಸಮುದಾಯದ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ಮತ್ತು ಸಾಮಾಜಿಕ ಅನುಕೂಲಗಳು ಸಿಗುತ್ತವೆ ಎಂದು ಮುಖಂಡರು ಒತ್ತಿ ಒತ್ತಿ ಹೇಳಿದರು.
ಅಧಿಕಾರಿಗಳು ಮನೆ ಮನೆಗೆ ಸರ್ವೆಗೆ ಬಂದಾಗ ಯಾವುದೇ ಗೊಂದಲ, ಯಾವುದೇ ಅನುಮಾನವಿಲ್ಲದೇ ಜಾತಿ – ಕಾಡುಗೊಲ್ಲ, ಉಪಜಾತಿ- ಕಾಡುಗೊಲ್ಲ, ಧರ್ಮ- ಹಿಂದೂ ಹಾಗೂ ವೃತ್ತಿಯಲ್ಲಿ – ಕುರಿ ಮೇಕೆ ಮತ್ತು ಪಶುಸಂಗೋಪನೆ ಎಂದು ನಮೂದಿಸಬೇಕು. ಸಮುದಾಯದ ಯುವ ಚಿಂತಕರು, ವಿದ್ಯಾರ್ಥಿಗಳು, ಹೋರಾಟಗಾರರು, ಮುಖಂಡರು ಮತ್ತು ರಾಜಕೀಯ ನಾಯಕರು, ವಿದ್ಯಾವಂತ ಯುವಕರು ಹಟ್ಟಿಗಳಲ್ಲಿ ಮುಂದೆ ನಿಂತು ಕೆಲಸ ಮಾಡಬೇಕು. ನಮ್ಮಲ್ಲಿ ಯಾವುದೇ ವೈಷಮ್ಯವಿಲ್ಲದೇ, ಪಕ್ಷತಿತವಾಗಿ ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಅಣ್ಣತಮ್ಮಂದಿರು ಹಾಗೂ ನೆಂಟರು ಜವಾಬ್ದಾರಿಯಿಂದ ಕೆಲಸ ಮಾಡೋಣ. ಹಿರಿಯರ ಮಾರ್ಗದರ್ಶನದಲ್ಲಿ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯಾವಂತ ಹಾಗೂ ಸಮುದಾಯದ ಬಗ್ಗೆ ಕಳಾಜಿಯಿರುವ ಯುವಕರು ತಂಡಗಳನ್ನು ರಚಿಸಿ ಸರ್ವೇ ಕಾರ್ಯವನ್ನು ಯಶಸ್ವಿಯಾಗಿಸುವ ಮೂಲಕ ಸಮಾಜದದ ಅಭಿವೃದ್ಧಿ ಎಲ್ಲರೂ ಶ್ರಮಿಸೋಣ ಈ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಮುಂದೆ ನಿಂತು ಕೆಲಸ ಮಾಡುವ ಮೂಲಕ ಹಿರಿಯೂರು ಕಾಡುಗೊಲ್ಲರು ಇತರರಿಗೆ ಮಾದರಿಯಾಗೋಣ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಅನ್ನಪೂರ್ಣಮ್ಮ ನೇತೃತ್ವದಲ್ಲಿ ಕಾಡುಗೊಲ್ಲ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ನಡೆಸಿದರು. ಬಳಿಕ ರಾಜ್ಯದಲ್ಲಿರುವ ಪ್ರತ್ಯೇಕ ಕಾಡುಗೊಲ್ಲ ಜಾತಿ ಇದೆಯೆಂದು ಕಾಡುಗೊಲ್ಲನ್ನು ಗುರುತಿಸಿ ಜಾತಿಪಟ್ಟಿ ನೀಡಿದರು. ಅಲ್ಲದೆ ಕಾಡುಗೊಲ್ಲರಿಗೆ ಎಸ್ಟಿ ಸದಸ್ಯತ್ವ ನೀಡಲು ಕೇಂದ್ರಕ್ಕೆ ಕಡತವನ್ನು ಶಿಫಾರಸು ಮಾಡಿದ್ದು, ಸದರಿ ಕಡತವು ಈಗಾಗಲೇ ಕೇಂದ್ರದಲ್ಲಿದೆ. ಆದರೆ ಕೆಲವು ಕಾಣದ ಕೈಗಳು ರಾಜ್ಯದಲ್ಲಿ ಕಾಡುಗೊಲ್ಲರು ಇಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದರು. ಇನ್ನಾದರೂ ನಾವು ಎಚ್ಚೆತ್ತುಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಹಾಗೂ ಜನಸಂಖ್ಯೆ ನಿಖರವಾಗಿ ಮಾಹಿತಿ ತಿಳಿಯಲು ಕಾಡುಗೊಲ್ಲ ಎಂದೇ ನಮೂದಿಸೋಣ, ಜಾತಿ ಗಣತಿ ಸರ್ವೇ ಕಾರ್ಯ ಮುಗಿದ ಬಳಿಕ ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡ, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸಂಸದ ಗೋವಿಂದ ಕಾರಜೋಳ ಹಾಗೂ ರಾಜ್ಯ ನಾಯಕರುಗಳನ್ನು ಭೇಟಿ ಮಾಡಿ ಮೀಸಲಾತಿ ಹೋರಾಟ ಮಾಡೋಣ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದಂತ ಹಿರಿಯೂರು ನಗರಸಭೆ ಸದಸ್ಯ ಚಿತ್ರಜಿತ್ ಯಾದವ್, ಚಿತ್ರದುರ್ಗ ಯಾದವ ಗುರುಪೀಠದ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ ಹಾಗೂ ಎಂಎಲ್ಸಿ ಡಿಟಿ ಶ್ರೀನಿವಾಸ್ ಅವರು ಜಾತಿ ಕಾಲಂ ನಲ್ಲಿ ಉಪಜಾತಿ ಕಾಡುಗೊಲ್ಲ ಎಂದು ಹೇಳಿಕೆ ನೀಡಿ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕಾಡುಗೊಲ್ಲ ಎಂಬುದು ಒಂದು ಬುಡಕಟ್ಟು ಪ್ರತ್ಯೇಕ ಜಾತಿಯಾಗಿದೆ. ನಮಗೆ ತಮ್ಮದೇ ಆದ ಬುಡಕಟ್ಟು ಲಕ್ಷಣಗಳಿವೆ. ಗೊಲ್ಲ ಜಾತಿನೇ ಬೇರೆ, ಕಾಡುಗೊಲ್ಲ ಜಾತಿನೇ ಬೇರೆ. ಮತ್ತೊಮ್ಮೆ ಡಿಟಿ ಶ್ರೀನಿವಾಸ್ ಇದೆ ತರಹದ ಹೇಳಿಕೆ ನೀಡಿದರೇ ಕಾಡುಗೊಲ್ಲರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿಆರ್. ದಾಸ್, ಗೌರವಾಧ್ಯಕ್ಷ ಆಲಮರದಹಟ್ಟಿ ರಂಗಯ್ಯ, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಬಿಕೆ ಕರಿಯಪ್ಪ, ಗೀತಾ ನಂದಿನಿಗೌಡ, ನಿವೃತ್ತ ಪ್ರಾಧ್ಯಾಪಕ ಜಿ. ರಾಜಶೇಖರ್, ಎಜಿ ತಿಮ್ಮಯ್ಯ, ಪಿಎಸ್. ಪಾತಯ್ಯ, ಎಸ್.ಆರ್. ತಿಪ್ಪೇಸ್ವಾಮಿ, ಜಿ. ಪ್ರೇಮ್ ಕುಮಾರ್, ಕೆ. ಅಭಿನಂದನ್, ಕೆಟಿ ತಿಪ್ಪೇಸ್ವಾಮಿ, ಜೆಜಿ ಹಳ್ಳಿ ಮಂಜುನಾಥ್, ಡಾಬಾ ಚಿಕ್ಕಣ್ಣ, ಮಹಾಲಿಂಗಪ್ಪ,ಎಸ್. ಶಿವರಂಜನಿ ಕಾಡುಗೊಲ್ಲ, ಬೇತೂರು ತಿಮ್ಮಣ್ಣ, ವಕೀಲ ಯತೀಶ್, ನಾಗಪ್ಪ, ತಿಮ್ಮಣ್ಣ, ಗೋಪಿ ಯಾದವ್, ಹೇಮಂತ್ ಕುಮಾರ್, ಜನಾರ್ಧನ್, ವೇದಮೂರ್ತಿ, ನಾಗೇಂದ್ರ, ನಾಗರಾಜ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ವಸಂತ ಬಿ ಈಶ್ವರಗೆರೆ.., ಸಂಪಾದಕರು

ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯದ ಜನತೆಗೆ ಗುಡ್ ನ್ಯೂಸ್: 10 ತಾಲ್ಲೂಕಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ







