ಚಿಕ್ಕಮಗಳೂರು : ಸೂರ್ಯಗ್ರಹಣ ಹಿನ್ನೆಲೆ ಜಯಪುರ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಸೂರ್ಯಗ್ರಹಣದ ಹಿನ್ನೆಲೆ ಎಲ್ಲರ ಒಳಿತಿಗಾಗಿ ಖತೀಬರಾದ ಅಬ್ದುಲ್ ರಶೀದ್ ಸಅದಿ ನೇತೃತ್ವದಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದು 2022ರ ವರ್ಷದ ಕೊನೆಯ ಸೂರ್ಯಗ್ರಣವು ಇದೀಗ ಮುಕ್ತಾಯಗೊಂಡಿದೆ. ಸಂಜೆ 6.27ಕ್ಕೆ ಸೂರ್ಯಗ್ರಹಣವು ಮುಕ್ತಾಯಗೊಂಡಿದೆ. ಗ್ರಹಣವನ್ನು ಅನೇಕ ಖಗೋಳಾಸಕ್ತರು ಕಣ್ ತುಂಬಿಕೊಂಡರು. ಗ್ರಹಣದ ನಂತ್ರ ರಾಜ್ಯದ ವಿವಿಧ ದೇವಾಲಯಗಳಲ್ಲಿ ಗ್ರಹಣದ ದೋಷ ನಿವಾರಣೆಗಾಗಿ ಶುದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ.
Gold prices: ದೀಪಾವಳಿ ಹಬ್ಬದ ಹೊತ್ತಲ್ಲೇ ಇಳಿಕೆಯಾದ ಬಂಗಾರದ ಬೆಲೆ: ಬೆಳ್ಳಿ ದರವೂ ಇಳಿಕೆ
BREAKING NEWS: ವರ್ಷದ ಕೊನೆಯ ಸೂರ್ಯ ಗ್ರಹಣ ಮುಕ್ತಾಯ: ರಾಜ್ಯದ ಹಲವು ದೇವಾಲಯಗಳಲ್ಲಿ ಶುದ್ಧಿ ಕಾರ್ಯ ಆರಂಭ