ಬೆಂಗಳೂರು: ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಗೇಟ್ ಸಂಖ್ಯೆ 62) ಬಳಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಭಾಗಶಃ ರದ್ದು: ಮಾರ್ಚ್ 11 ಮತ್ತು 22 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂ. 07329 ಎಸ್ಎಸ್ಎಸ್ ಹುಬ್ಬಳ್ಳಿ – ವಿಜಯಪುರ ಡೆಮು ಸ್ಪೆಷಲ್ ರೈಲು ಬಾಗಲಕೋಟೆ ನಿಲ್ದಾಣಕ್ಕೆ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಅಂದರೆ ಬಾಗಲಕೋಟೆ ಮತ್ತು ವಿಜಯಪುರ ನಡುವೆ ಈ ರೈಲಿನ ಸಂಚಾರ ರದ್ದಾಗಿರುತ್ತದೆ.
ಮಾರ್ಚ್ 12 ಮತ್ತು 23 ರಂದು ರೈಲು ಸಂ. 07330 ವಿಜಯಪುರ – ಎಸ್ಎಸ್ಎಸ್ ಹುಬ್ಬಳ್ಳಿ ಡೆಮು ಸ್ಪೆಷಲ್ ವಿಜಯಪುರದ ಬದಲಾಗಿ ಬಾಗಲಕೋಟೆ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. ಈ ದಿನಗಳಂದು ವಿಜಯಪುರ ಮತ್ತು ಬಾಗಲಕೋಟೆ ನಡುವೆ ರೈಲು ಸೇವೆ ಇರುವುದಿಲ್ಲ.
ನಿಯಂತ್ರಣ: ಧಾರವಾಡದಿಂದ ಸೊಲ್ಲಾಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು (56904) ಮಾರ್ಚ್ 10, 11, 21 ಮತ್ತು 22ರಂದು ಮಾರ್ಗಮಧ್ಯೆ ಸುಮಾರು 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ
BREAKING : ಇಸ್ರೇಲ್ ಮತ್ತು ಅಮೆರಿಕದ ದಾಳಿಯ ನಡುವೆ ಇರಾನ್ ನಲ್ಲಿ 4.3 ತೀವ್ರತೆಯ ಭೂಕಂಪ !








