ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯವನ್ನು (ಬಜೆಟ್) ಅನುಮೋದಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಬರುವ ಶುಕ್ರವಾರ, ಅಂದರೆ ಮಾರ್ಚ್ 06, 2026ರಂದು ಬೆಳಿಗ್ಗೆ 9:45ಕ್ಕೆ ಸಚಿವ ಸಂಪುಟದ ವಿಶೇಷ ಸಭೆಯನ್ನು ಕರೆಯಲಾಗಿದೆ. ಬೆಂಗಳೂರಿನ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟ ಸಭಾಮಂದಿರದಲ್ಲಿ ಈ ಮಹತ್ವದ ಸಭೆ ನಡೆಯಲಿದೆ. ಈ ಕುರಿತು ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಮಂಗಳವಾರ ಅಧಿಕೃತ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ಬಜೆಟ್ ಮೇಲೆ ಕುತೂಹಲ … Continue reading ಮಾ.6ರಂದು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆ: 2026-27ನೇ ಸಾಲಿನ ಬಜೆಟ್ ಅನುಮೋದನೆಗೆ ಸಜ್ಜಾದ ಸರ್ಕಾರ