ಹುಬ್ಬಳ್ಳಿ: ಅರಸೀಕೆರೆ ಯಾರ್ಡ್ನಲ್ಲಿ ಡಿಸೆಂಬರ್ 15 ರಿಂದ 27, 2025 ರವರೆಗೆ (ಶುಕ್ರವಾರ ಹೊರತುಪಡಿಸಿ) ಕೈಗೊಳ್ಳುತ್ತಿರುವ ಪ್ಲಾಟ್ಫಾರ್ಮ್ ಶೆಲ್ಟರ್ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ.
1. ಡಿಸೆಂಬರ್ 14 ರಿಂದ 26, ರವರೆಗೆ, ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ–ಅರಸೀಕೆರೆ ಎಕ್ಸ್ ಪ್ರೆಸ್ ರೈಲು ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.
2. ಡಿಸೆಂಬರ್ 15 ರಿಂದ 27, 2025 ರವರೆಗೆ, ರೈಲು ಸಂಖ್ಯೆ 16213 ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮತ್ತು ಬೀರೂರು ನಡುವೆ ಭಾಗಶಃ ರದ್ದುಗೊಂಡು, ನಿಗದಿತ ಸಮಯಕ್ಕೆ ಬೀರೂರು ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.
3. ಡಿಸೆಂಬರ್ 15 ರಿಂದ 27, 2025 ರವರೆಗೆ, ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆ ಮತ್ತು ಹಾಸನ ನಡುವೆ ಭಾಗಶಃ ರದ್ದುಗೊಂಡು, ನಿಗದಿತ ಸಮಯಕ್ಕೆ ಹಾಸನ ನಿಲ್ದಾಣದಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ.
Alert : ಈ `ಬ್ಲಡ್ ಗ್ರೂಪ್’ ಹೊಂದಿರುವವರಿಗೆ `ಕ್ಯಾನ್ಸರ್’ ಅಪಾಯ ಹೆಚ್ಚು.!








