ಶೃಂಗೇರಿ: ಕುಡಿದ ಮತ್ತಿನಲ್ಲಿ ಕುಡುಕನೊಬ್ಬ 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿ ಗಲಾಟೆಯಾಗಿ ಹಲವರಿಗೆ ಗಾಯವಾಗಿದೆ. ಬೇಗ ಬನ್ನಿ ಅಂತ ಕೋರಿದ್ದಾನೆ. ಆನಂತ್ರ ಮುಂದೇನಾಯ್ತು ಗೊತ್ತಾ.?
ಶೃಂಗೇರಿಯಲ್ಲಿ ವ್ಯಕ್ತಿಯೊಬ್ಬ ಕುಡಿತ ಮತ್ತಿನಲ್ಲಿ 108 ಆಂಬುಲೆನ್ಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಶೃಂಗೇರಿಯ ಬಸ್ ನಿಲ್ದಾಣದಲ್ಲಿ ದೊಡ್ಡ ಗಲಾಟೆಯಾಗಿದೆ. ಹೊಡೆದಾಟದಲ್ಲಿ ಹಲವರಿಗೆ ಗಾಯವಾಗಿದೆ. ಬೇಗ ಸ್ಥಳಕ್ಕೆ ಬನ್ನಿ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಅಂತ ತಿಳಿಸಿದ್ದಾನೆ.
ಶೃಂಗೇರಿ ಹಾಗೂ ಕೊಪ್ಪದ 108 ಅಂಬುಲೆನ್ಸ್ 45 ಕಿಲೋಮೀಟರ್ ದೂರದಲ್ಲಿ ಇದ್ದ ಕಾರಣ, ಸಮೀಪದಲ್ಲೇ ಇದ್ದಂತ ಬಾಳೆಹೊನ್ನೂರಿನ 108 ಆಂಬುಲೆನ್ಸ್ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಆದರೇ ಅಲ್ಲಿ ನೋಡಿದ್ರೇ ಯಾವುದೇ ಗಲಾಟೆಯೂ ಆಗಿಲ್ಲ. ಯಾರಿಗೂ ಗಾಯವೂ ಆಗಿಲ್ಲ.
ಈ ವಿಚಾರದ ನಂತ್ರ 112ಗೂ ದೂರು ನೀಡಲಾಗಿದೆ. ಸ್ಥಳಕ್ಕೆ ಬಂದಂತ ಪೊಲೀಸರು ಪರಿಶೀಲಿಸಿ ಯಾವುದೇ ಆ ರೀತಿಯ ಗಲಾಟೆ ಆಗಿರದೇ ಇದ್ದದ್ದನ್ನು ಕಂಡು, ಪೋನ್ ಮಾಡಿದಾತನ ಹುಡುಕಾಟಕ್ಕೆ ನಿಂತಿದ್ದಾರೆ. ಅದೇ ಪೋನ್ ನಂಬರ್ ಗೆ ಪೋನ್ ಮಾಡಿದಾಗ, ಅತ್ತ ರಿಸೀವ್ ಮಾಡಿದಂತ ವ್ಯಕ್ತಿ ನಾನು ಭೂಮಿ ಮೇಲೆ, ಆಕಾಶದ ಕೆಳಗೆ ಇದ್ದೇನೆ. ತಾಕತ್ತು ಇದ್ದರೇ ನನ್ನನ್ನು ಹಿಡಿಯಿರಿ ಅಂತ ಸವಾಲ್ ಎಸೆದಿದ್ದಾನೆ.
ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಫೇಕ್ ಕರೆ ಮಾಡಿ ಆಂಬುಲೆನ್ಸ್ ಗೆ, ಪೊಲೀಸರಿಗೆ ಕಿರಿಕ್ ಮಾಡಿದಂತ ವ್ಯಕ್ತಿಯನ್ನು ಹುಡುಕಾಡಿದ್ದಾರೆ. ಮೊಬೈಲ್ ಜಾಡು ಹಿಡಿದು ಕೊನೆಗೂ ವೈನ್ ಶಾಪ್ ನಲ್ಲಿ ಇದ್ದಂತ ವ್ಯಕ್ತಿಯನ್ನು ಹಿಡಿದು, ಪೊಲೀಸರ ಲಾಠಿ ರುಚಿ ತೋರಿಸಿದ್ದಾರೆ.