ಬೆಂಗಳೂರು: ರಾಜ್ಯದ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ, ವಶಪಡಿಸಿಕೊಳ್ಳಲಾಗಿರುವಂತ ಕೋಟ್ಯಂತರ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು, ಇಂದು ಮತ್ತು ನಾಳೆ ನಾಶಪಡಿಸಲಾಗುತ್ತಿದೆ.
ಈ ಕುರಿತಂತೆ ಕರ್ನಾಟಕ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಅವಿರತ ಪ್ರಯತ್ನವನ್ನು ಮಾಡಲಾಗುತ್ತಿದೆ. ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿ ಮಾದಕ ದ್ರವ್ಯಗಳ ಕಳ್ಳ ಸಾಗಾಣೆ ಮಾಡುವವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ರಾಜ್ಯದ ವಿವಿಧ ಜಿಲ್ಲಾ ಪೊಲೀಸ್/ ಪೊಲೀಸ್ ಕಮಿಷನರೇಟ್‌ಗಳಲ್ಲಿ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ನಿಯಮಗಳನ್ನು ಅನುಸರಿಸಿ ನಾಶ ಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.
ವಶಪಡಿಸಿಕೊಂಡ ಅಂದಾಜು ಮೊತ್ತ ರೂ.42.16 ಕೋಟಿಗಳ ವಿವಿಧ ಬಗೆಯ ಮಾದಕ ವಸ್ತುಗಳನ್ನು ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ಕಛೇರಿಗಳಲ್ಲಿ ದಿನಾಂಕ: 08.02.2024 ಹಾಗೂ 09.02.2024ರಂದು ನಾಶ ಪಡಿಸಲು ಹಾಗೂ ಅಂದಾಜು ಮೊತ್ತ ರೂ.17 ಕೋಟಿಗಳ ಅಫೀಮನ್ನು ಕಾರ್ಖಾನೆಗಳ ಮುಖ್ಯ ನಿಯಂತ್ರಕರವರಿಗೆ ಕಳುಹಿಸುವ ಮೂಲಕ ವಶ ಪಡಿಸಿಕೊಳ್ಳಲಾದ ಒಟ್ಟು ರೂ.59.16 ಕೋಟಿಗಳ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ತೀರ್ಮಾನಿಸಿದೆ ಎಂದಿದೆ.
ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಮೈಸೂರು ನಗರ, ಕೇಂದ್ರ ವಲಯ, ದಕ್ಷಿಣ ವಲಯ ಜಿಲ್ಲೆಗಳು ಮತ್ತು ಕರ್ನಾಟಕ ರೈಲ್ವೇ ಪೊಲೀಸ್ ರವರಿಂದ ವಶಪಡಿಸಿಕೊಳ್ಳಲಾದ ಅಂದಾಜು ಮೊತ್ತ ರೂ.36.65 ಕೋಟಿಗಳ ಗಾಂಜಾ, ಬ್ರೌನ್ ಶುಗರ್, ಹೆರಾಯಿನ್, ಚರಾಸ್, ಎಂಡಿಎಂಎ, ಎಲ್‌ಎಸ್‌ಡಿಗಳ ಮಾದಕ ವಸ್ತುಗಳನ್ನು ದಿನಾಂಕ: 09.02.2024 ರಂದು ಮಾನ್ಯ ಗೃಹ ಮಂತ್ರಿಗಳಾದ ಡಾ| ಜಿ. ಪರಮೇಶ್ವರ ಮತ್ತು ಡಾ|| ಅಲೋಕ್ ಮೋಹನ್, ಐಪಿಎಸ್, ಡಿಜಿ & ಐಜಿಪಿ ರವರುಗಳ ಉಪಸ್ಥಿತಿಯಲ್ಲಿ “ದಹನಕಾರಿ ಸ್ಥಾವರ, ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ, ಕೆಐಎಡಿಬಿ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಾಶ ಪಡಿಸಲಾಗುತ್ತಿದೆ ಎಂದು ಹೇಳಿದೆ.
ಕೆಂಪಣ್ಣ ಹೇಳಿಕೆ ಕುರಿತು ಜಸ್ಟಿಸ್ ನಾಗಮೋಹನದಾಸ್ ಸಮಿತಿ ಸ್ವಯಂಪ್ರೇರಿತ ತನಿಖೆ ಮಾಡಲಿ- ಅಶ್ವತ್ಥನಾರಾಯಣ ಒತ್ತಾಯ
Janaspandana: ‘ಸಿಎಂ ಜನಸ್ಪಂದನ’ಕ್ಕೆ ಭರ್ಜರಿ ರೆಸ್ಪಾನ್ಸ್: ಇದುವರೆಗೆ ‘11,601 ಅರ್ಜಿ’ ಸ್ವೀಕೃತ