ಬೆಂಗಳೂರು : ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ದಂಧೆ ಹೆಚ್ಚಳವಾಗುತ್ತಿದ್ದು, ಕೆ.ಆರ್.ಪುರಂನ, ಟಿ.ಸಿ ಪಾಳ್ಯ ಏರಿಯಾದಲ್ಲಿ ಖಾಲಿ ಸೈಟ್ಗಳಲ್ಲಿ ಗಾಂಜಾ ಬಚ್ಚಿಟ್ಟು ಡ್ರಗ್ಸ್ ದಂಧೆ ನಡೆಸುತ್ತಿರೋ ಮಾಹಿತಿ ಬಹಿರಂಗವಾಗಿದೆ.
BIGG NEWS : ಸಿದ್ದರಾಮೋತ್ಸವದ ಬೆನ್ನಲ್ಲೇ ಡಿಕೆಶಿ ಬೆಂಬಲಿಗರಿಂದ `ಶಿವಕುಮಾರೋತ್ಸವ’ ಮಾಡುವಂತೆ ಒತ್ತಾಯ!
ಖಾಲಿ ಸೈಟ್ಗಳಲ್ಲಿ ಗಾಂಜಾ ಬಚ್ಚಿಟ್ಟು ಕಿರಾಕಿಗಳಿಗೆ ಲೊಕೇಶನ್ ಶೇರ್ ಮಾಡಿ ದಂಧೆಕೋರರು ಎಸ್ಕೇಪ್ ಆಗುವ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಈ ಅನುಮಾನಾಸ್ಪದ ಚಟುವಟಿಕೆಗಳನ್ನು ಸ್ಥಳೀಯರು ಗಮನಿಸಿದ್ದರು. ಬಳಿಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, 10ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ. ಈವರೆಗೂ 25ಕ್ಕೂ ಹೆಚ್ಚು ಅಧಿಕ ಡ್ರಗ್ಸ್ ಪೆಡ್ಲರ್ಗಳ ಬಂಧನ ಮಾಡಲಾಗಿದೆ.