Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯ’ರನ್ನಾಗಿ ‘ಡಾ.ಮಹಂತೇಶ್ ಪಾಟೀಲ್’ ನೇಮಿಸಿ ಸರ್ಕಾರ ಆದೇಶ

31/10/2025 10:31 PM

‘SBI’ ಗ್ರಾಹಕರೇ ಗಮನಿಸಿ ; ನ.1ರಿಂದ SBI ‘ಕ್ರೆಡಿಟ್ ಕಾರ್ಡ್ ಶುಲ್ಕ’ಗಳು ಬದಲಾವಣೆ, ಒಮ್ಮೆ ಚೆಕ್ ಮಾಡಿ!

31/10/2025 10:07 PM

ನಕಲಿ ‘ORS ಲೇಬಲ್’ಗಳು ಆರೋಗ್ಯಕ್ಕೆ ಅಪಾಯಕಾರಿ ; ಮಾರುಕಟ್ಟೆಯಲ್ಲಿ ಲಭ್ಯವಿಲ್ಲ : ಹೈಕೋರ್ಟ್

31/10/2025 9:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬರ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ : ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ
KARNATAKA

ಬರ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ : ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

By kannadanewsnow5719/05/2024 5:17 AM

ಧಾರವಾಡ : ಸರಕಾರವು ಯಾವುದೇ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ ಹಾಗೂ ಸಾರ್ವಜನಿಕರ ಜೀವನೋಪಾಯಕ್ಕಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ ಬರ ಪರಿಹಾರದ ಹಣ ಸೇರಿದಂತೆ ವೃದ್ಯಾಪ್ಯ ವೇತನ, ಅಂಗವಿಕಲರ ಮಾಶಾಸನ, ನರೆಗಾ ಕೂಲಿ ಹಾಗೂ ಇತರೆ ಸರಕಾರದಿಂದ ಬಿಡುಗಡೆ ಆಗಿರುವಂತಹ ಪ್ರೋತ್ಸಾಹ ಧನ ನೇರವಾಗಿ ಫಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ) ಸಂದಾಯವಾಗಿರುವಂತಹ ಹಣವನ್ನು ಯಾವುದೇ ಕಾರಣಕ್ಕೆ ಸಾಲದ ಖಾತೆಗೆ ಜಮಾ ಮಾಡಬಾರದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಸರಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣವು ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಆಗಿತ್ತಿರುವ ಕುರಿತು ರೈತರಿಂದ ದೂರುಗಳ ಕಾರಣ ಧಾರವಾಡ ರೂಡ್ ಸೆಟ್ ಆವರಣದ ಸಭಾಂಗಣದಲ್ಲಿ (RUDSETI) ಆವರಣದಲ್ಲಿ ಆರ್.ಬಿ.ಐ ಅಧಿಕಾರಿ ಮೋನಿ ರಾಜ ಬ್ರಹ್ಮ, ಜಿಲ್ಲಾ ಲೀಡ ಬ್ಯಾಂಕ ವ್ಯವಸ್ಥಾಪಕರ ಶ್ರೀ ಪ್ರಭುದೇವ ಎನ್ ಜಿ ಅವರ ಉಪಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕಿನ ವ್ಯವಸ್ಥಾಪಕರುಗಳ ಜೊತೆ ತುರ್ತು ಸಭೆಯನ್ನು ಜರುಗಿಸಿ, ಮಾತನಾಡಿದರು.

ಸರಕಾರದಿಂದ ಬಿಡುಗಡೆಯಾದ ಯಾವುದೇ ತರಹದ ಪ್ರೋತ್ಸಾಹ ಧನವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ಗ್ರಾಹಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಅವರ ಜೊತೆ ಸಂಯಮದಿಂದ ವರ್ತಿಸಬೇಕು. ತಾಂತ್ರಿಕ ಸಮಸ್ಯೆ ಇದ್ದರೆ ಗ್ರಾಹಕರಿಗೆ ಸರಿಯಾಗಿ ತಿಳುವಳಿಕೆ ನೀಡಿ ಮಾರ್ಗದರ್ಶನ ಮಾಡಬೇಕು ಮತ್ತು ಸಮಸ್ಯೆಯನ್ನು ಬೇಗನೆ ಪರಿಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಧಾರವಾಡ ಜಿಲ್ಲೆಯಲ್ಲಿ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಯೋಜನೆಗಳ ಲಾಭವನ್ನು ತಲುಪಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್ ಗಳು ಇದನ್ನು ಅನುಸರಿಸಬೇಕು. ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಸಾಲ, ಸಹಾಯಧನ ಸೌಲಭ್ಯ ದೊರೆಯಬೇಕು ಎಂದರು.

ರೈತರ ಸಹಮತ ವಿಲ್ಲದೆ ಬರಪರಿಹಾರ ಸೇರಿದಂತ ಯಾವ ಪ್ರೋತ್ಸಹಧನವನ್ನು ಸಾಲಕ್ಕೆ ಜಮೆ ಮಾಡಬಾರದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕ್ ಶಾಖೆಗಳಿಗೆ ಮಾಹಿತಿ ನೀಡಿ, ರೈತರಿಗೆ ತೊಂದರೆ ಆಗದಂತೆ ನಿರಂತರ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಲೀಡ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್. ಜಿ. ಅವರು 2023-24 ಸಾಲಿನ ಪ್ರಗತಿಯನ್ನು ವಿವರಿಸುತ್ತಾ, ಜಿಲ್ಲೆಯ ಬ್ಯಾಂಕುಗಳಿಂದ 2,90,392 ಫಲಾನುಭವಿಗಳು ಕೃಷಿ ಸಾಲ ಪಡೆದಿದ್ದಾರೆ. ಗೊತ್ತುಪಡಿಸಿದ ಗುರಿಗೆ ಹೋಲಿಸಲಾಗಿ
ಶೇ. 125 ಕೃಷಿ ಸಾಲ ಮತ್ತು ಶೇ.164 ಆಧ್ಯತಾ ವಲಯಕ್ಕೆ ಹೆಚ್ಚಿನ ಸಾಲವನ್ನು ವಿತರಿಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನೆ 2024-25ರ ಕುರಿತು ಮಾಹಿತಿ ನೀಡುತ್ತಾ ಆಧ್ಯತಾವಲಯಕ್ಕೆ 12,738.76 ಕೋಟಿ ರೂ.ಗಳ ಗುರಿ ನಿಗದಿಪಡಿಸಲಾಗಿದ್ದು ಮಾರ್ಚ್ 2024ರ ಸಾಧನೆಗೆ ಹೋಲಿಸಲಾಗಿ ಆಧ್ಯತಾ ವಲಯಕ್ಕೆ ಸುಮಾರು ಶೇ. 14 ರಷ್ಟು ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

2024-25 ನೇ ಸಾಲಿನಲ್ಲಿ ಬೇಳೆ ಸಾಲ ವಲಯದಲ್ಲಿ 1,27,283 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,640.27 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 2291.25 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 140 ರಷ್ಟು ಶೇಕಡಾವಾರು ಸಾಧನೆ ಆಗಿದೆ.
ಕೃಷಿ ಅವಧಿ ಸಾಲ ವಲಯದಲ್ಲಿ 1,63,109 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 1,741.76 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 1,946.22 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 112 ಶೇಕಡಾವಾರು ಸಾಧನೆ ಆಗಿದೆ.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 47,160 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 3,021 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 6,368.18 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 211 ಶೇಕಡಾವಾರು ಸಾಧನೆ ಆಗಿದೆ.

ಇತರ ಆಧ್ಯತಾ ವಲಯದಲ್ಲಿ 68,824 ಫಲಾನುಭವಿಗಳು ಇದ್ದು, ಮಾರ್ಚ್ 2024 ರ ಅಂತ್ಯಕ್ಕೆ 471.87 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 658.24 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 139 ಶೇಕಡಾವಾರು ಸಾಧನೆ ಆಗಿದೆ. ಆಧ್ಯತಾ ರಹಿತ ವಲಯದಲ್ಲಿ 1,39,313 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 7,705.56 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 8,293.84 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 108 ಶೇಕಡಾವಾರು ಸಾಧನೆ ಆಗಿದೆ. ಒಟ್ಟಾರೆಯಾಗಿ 5,45,689 ಫಲಾನುಭವಿಗಳು ಇದ್ದು ಮಾರ್ಚ್ 2024 ರ ಅಂತ್ಯಕ್ಕೆ 14,580.46 ಕೋಟಿ ರೂ.ಗಳಷ್ಟು ಗುರಿ ಹೊಂದಿದ್ದು, 19,560.73ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ. ಒಟ್ಟು 139 ಶೇಕಡಾವಾರು ಸಾಧನೆ ಆಗಿದೆ ಎಂದು ಅವರು ತಿಳಿಸಿದರು.

2024-25 ರಲ್ಲಿ ಜಿಲ್ಲೆಯ ವಾರ್ಷಿಕ ವಿತ್ತೀಯ ಯೋಜನೆಯಲ್ಲಿ 2024-25 ರ ಅಂತ್ಯಕ್ಕೆ ಬೆಳೆ ಸಾಲ ವಲಯದಲ್ಲಿ 2,003.74, ಕೃಷಿ ಅವಧಿ ಸಾಲ ವಲಯದಲ್ಲಿ 1,223.11, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದಲ್ಲಿ 8,096.24, ಶಿಕ್ಷಣ ಸಾಲ ವಲಯದಲ್ಲಿ 59.70, ಗೃಹ ಸಾಲ ವಲಯದಲ್ಲಿ 284.90, ಇತರೆ ಆಧ್ಯತಾ ವಲಯದಲ್ಲಿ 429.90 ಹಾಗೂ ಆಧ್ಯತಾ ರಹಿತ ವಲಯದಲ್ಲಿ 7,314.77 ಕೋಟಿ ರೂ.ಗಳ ಗುರಿಯನ್ನು ಹೊಂದಲಾಗಿದ್ದು, ಒಟ್ಟಾರೆಯಾಗಿ 19,412.36 ಕೋಟಿ ರೂ.ಗಳ ಗುರಿಯ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

Drought relief money cannot be credited to loan account: State govt ಬರ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡುವಂತಿಲ್ಲ : ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ
Share. Facebook Twitter LinkedIn WhatsApp Email

Related Posts

‘ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯ’ರನ್ನಾಗಿ ‘ಡಾ.ಮಹಂತೇಶ್ ಪಾಟೀಲ್’ ನೇಮಿಸಿ ಸರ್ಕಾರ ಆದೇಶ

31/10/2025 10:31 PM1 Min Read

ರಾಜ್ಯದ ಕೆಲ ವಿವಿಗಳಿಗೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಅರಸು ನಾಮಕರಣಕ್ಕೆ ಸಿಎಂ ಸಿದ್ಧರಾಮಯ್ಯ ಆದೇಶ

31/10/2025 9:32 PM1 Min Read

ನವೆಂಬರ್ ಕ್ರಾಂತಿಯ ಚರ್ಚೆ ಬೆನ್ನಲ್ಲೇ ತ್ಯಾಗದ ಮಾತು ಆಡಿದ ಡಿಸಿಎಂ ಡಿಕೆಶಿ

31/10/2025 9:24 PM1 Min Read
Recent News

‘ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯ’ರನ್ನಾಗಿ ‘ಡಾ.ಮಹಂತೇಶ್ ಪಾಟೀಲ್’ ನೇಮಿಸಿ ಸರ್ಕಾರ ಆದೇಶ

31/10/2025 10:31 PM

‘SBI’ ಗ್ರಾಹಕರೇ ಗಮನಿಸಿ ; ನ.1ರಿಂದ SBI ‘ಕ್ರೆಡಿಟ್ ಕಾರ್ಡ್ ಶುಲ್ಕ’ಗಳು ಬದಲಾವಣೆ, ಒಮ್ಮೆ ಚೆಕ್ ಮಾಡಿ!

31/10/2025 10:07 PM

ನಕಲಿ ‘ORS ಲೇಬಲ್’ಗಳು ಆರೋಗ್ಯಕ್ಕೆ ಅಪಾಯಕಾರಿ ; ಮಾರುಕಟ್ಟೆಯಲ್ಲಿ ಲಭ್ಯವಿಲ್ಲ : ಹೈಕೋರ್ಟ್

31/10/2025 9:50 PM

ರಾಜ್ಯದ ಕೆಲ ವಿವಿಗಳಿಗೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಅರಸು ನಾಮಕರಣಕ್ಕೆ ಸಿಎಂ ಸಿದ್ಧರಾಮಯ್ಯ ಆದೇಶ

31/10/2025 9:32 PM
State News
KARNATAKA

‘ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯ’ರನ್ನಾಗಿ ‘ಡಾ.ಮಹಂತೇಶ್ ಪಾಟೀಲ್’ ನೇಮಿಸಿ ಸರ್ಕಾರ ಆದೇಶ

By kannadanewsnow0931/10/2025 10:31 PM KARNATAKA 1 Min Read

ಬೆಂಗಳೂರು: ಬೆಂಗಳೂರು ನಗರ ವಿಶ್ವ ವಿದ್ಯಾನಿಲಯಕ್ಕೆ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರನ್ನಾಗಿ ಡಾ.ಮಹಂತೇಶ್ ಪಾಟೀಲ್(ಡಾ.ಮಹಂತಗೌಡ) ಅವರನ್ನು ನೇಮಿಸಿ ಕುಲಸಚಿವರು ಆದೇಶಿಸಿದ್ದಾರೆ. ಈ…

ರಾಜ್ಯದ ಕೆಲ ವಿವಿಗಳಿಗೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಅರಸು ನಾಮಕರಣಕ್ಕೆ ಸಿಎಂ ಸಿದ್ಧರಾಮಯ್ಯ ಆದೇಶ

31/10/2025 9:32 PM

ನವೆಂಬರ್ ಕ್ರಾಂತಿಯ ಚರ್ಚೆ ಬೆನ್ನಲ್ಲೇ ತ್ಯಾಗದ ಮಾತು ಆಡಿದ ಡಿಸಿಎಂ ಡಿಕೆಶಿ

31/10/2025 9:24 PM

BREAKING: ರಾಜ್ಯಾದ್ಯಂತ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ‘ಪ್ಲಾಸ್ಟಿಕ್ ಬಾಟಲ್ ನೀರು’ ಬಳಸುವಂತಿಲ್ಲ: ಸಿಎಂ ಸಿದ್ಧರಾಮಯ್ಯ ಆದೇಶ

31/10/2025 9:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.