ಬೆಂಗಳೂರು : ನಾನು ಡ್ರೋನ್ ಕಂಡು ಹಿಡಿದಿದ್ದೇನೆ,ಡ್ರೋನ್ ತಂತ್ರಜ್ಞಾನದಲ್ಲಿ ಭಾರಿ ಪರಿಣತಿ ಸಾಧಿಸಿದ್ದೇನೆ ಎಂದು ಹೇಳಿ ವ್ಯಾಪಕ ಟ್ರೋಲ್ ಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಮತ್ತೆ ಪ್ರತ್ಯಕ್ಷವಾಗಿದ್ದಾರೆ.
ಇನ್ ಸ್ಟಾಗ್ರಾಂ, ಫೇಸ್ ಬುಕ್, ಟ್ವಿಟರ್ ನಲ್ಲಿಪ್ರತಾಪ್ ಮಾಡಿರುವ ಹೊಸ ಪೋಸ್ಟ್ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಭಾರೀ ಟ್ರೋಲ್ ಮಾಡುತ್ತಿದ್ದಾರೆ.ಇನ್ ಸ್ಟಾಗ್ರಾಂ ನಲ್ಲಿ ಸಕ್ರಿಯರಾಗಿರುವ ಡ್ರೋನ್ ಪ್ರತಾಪ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಫೋಟೋ, ಬೇರೆ ದೇಶದಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಪೋಸ್ಟ್ ನೊಂದಿಗೆ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದು, ಭಾರೀ ಟ್ರೋಲ್ ಗೆ ಒಳಗಾಗಿದ್ದಾರೆ.
ಲ್ಯಾಪ್ ಟಾಪ್ ಎದುರು ಕುಳಿರುವ ಪ್ರತಾಪ್ ಕೈಗೆ ಹಳದಿ ಬಣ್ಣದ ಗ್ಲೌಸ್ ಧರಿಸಿದ್ದಾರೆ ಜೊತೆಗೆ ಟೇಬಲ್ ಮೇಲೆ ಡ್ರೋನ್ ರೆಕ್ಕೆಗಳು, ಕೈಯಲ್ಲಿ ಸಾಲ್ಡರಿಂಗ್ ಗನ್ ಹಿಡಿದಿದ್ದಾರೆ. ಕ್ಯಾಮೆರಾದತ್ತ ನೋಡಿ ಫೋಸ್ ನೀಡಿದ್ದಾರೆ. ಸದ್ಯ ಈ ಪೋಸ್ಟ್ ಭಾರೀ ಟೀಕೆಗೊಳಗಾಗಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ. ಅಣ್ಣ ಮಿಕ್ಸಿ ರಿಪೇರಿನಾ.. ? ಎಂದು ನೆಟ್ಟಿಗರೊಬ್ಬರು ಕೇಳಿದರೆ, ಇನ್ನೊಬ್ಬರು ಈ ಸಲ ರಾಕೆಟ್ ಹಾರುಸ್ತೀರ ಅಣ್ಣಾ..? ಎಂದು ಕಮೆಂಟ್ ಮಾಡಿದ್ದಾರೆ.
BIGG NEWS ; ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ ; ವಿಶ್ವದ ಅತಿದೊಡ್ಡ ‘ಐಫೋನ್ ಫ್ಯಾಕ್ಟರಿ’ ಪ್ರದೇಶ ಲಾಕ್ ಡೌನ್
‘SSLC ವಾರ್ಷಿಕ ಪರೀಕ್ಷೆ ವೇಳಾಪಟ್ಟಿ’ ಮರು ಪರಿಷ್ಕರಿಸಿ: ‘ಪ್ರೌಢಶಾಲಾ ಸಹ ಶಿಕ್ಷಕರ ಸಂಘ’ದ ಮನವಿ