ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಸ್ಟಂಟ್ ಮಾಡಲು ಹೋಗಿ ಕಾರೊಂದು ಡಿವೈಡರ್ ಮೇಲಿಂದ ಜಿಗಿದು ರೈಲಿಂಗ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಸುರಕ್ಷಿತವಾಗಿದ್ದ, ಕಾರಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
#WATCH | HP: A video went viral showing a car jumping over a divider & colliding with railing on NH-5 in Solan; a resident from Amritsar tried performing stunts while rash driving. Vehicle damaged but driver safe. Case filed u/s 279 of IPC in Dharampur PS: Solan Police (25.07) pic.twitter.com/o5ajWRJuiG
— ANI (@ANI) July 25, 2022
ಚಾಲಕನನ್ನು ಅಮೃತಸರ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ವಾಹನ ಚಲಾಯಿಸುವಾಗ ಕೆಲವು ಸಾಹಸ ಮಾಡಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಸೋಲನ್ನ ಎನ್ಹೆಚ್-5 ನಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಅಮೃತಸರದ ನಿವಾಸಿಯೊಬ್ಬರು ದುಡುಕಿನ ಚಾಲನೆಯಲ್ಲಿ ಸಾಹಸ ಪ್ರದರ್ಶಿಸಲು ಪ್ರಯತ್ನಿಸಿದ್ದರು. ಘಟನೆಯಲ್ಲಿ ವಾಹನಕ್ಕೆ ಹಾನಿಯಾಗಿದ್ದು, ಚಾಲಕ ಸುರಕ್ಷಿತವಾಗಿದ್ದಾರೆ. ಘಟನೆ ಕುರಿತಂತೆ ಧರಂಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ 279 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸೋಲನ್ ಪೊಲೀಸರು ತಿಳಿಸಿದ್ದಾರೆ.