ಗುವಾಹಟಿ(ಅಸ್ಸಾಂ): ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಹೆದ್ದಾರಿಯಲ್ಲಿ ಘೇಂಡಾಮೃಗಕ್ಕೆ ಟ್ರಕ್ವೊಂದು ಡಿಕ್ಕಿ ಹೊಡೆದ ವಿಡಿಯೋವನ್ನು ಸಿಎಂ ಹಿಮಂತ ಬಿಸ್ವಾ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಟ್ರಕ್ ಚಾಲಕನಿಗೆ ದಂಡ ವಿಧಿಸಲಾಗಿದೆ ಎಂದು ಭಾನುವಾರ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 37 ರಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ, ಈ ಮಧ್ಯೆ ಕಾಜಿರಂಗದಲ್ಲಿ ಪ್ರಾಣಿಗಳನ್ನು ಉಳಿಸುವ ನಮ್ಮ ಸಂಕಲ್ಪದಲ್ಲಿ ನಾವು ವಿಶೇಷ 32-ಕಿಮೀ ಎಲಿವೇಟೆಡ್ ಕಾರಿಡಾರ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು. ಅವುಗಳ ಜಾಗದಲ್ಲಿ ನಡೆದ ಯಾವುದೇ ಉಲ್ಲಂಘನೆಯನ್ನು ನಾವು ಅನುಮತಿಸುವುದಿಲ್ಲ. ಈ ದುರದೃಷ್ಟಕರ ಘಟನೆಯಲ್ಲಿ ಘೇಂಡಾಮೃಗ ಬದುಕುಳಿದಿದೆ. ಟ್ರಕ್ ಚಾಲಕನಿಗೆ ದಂಡ ವಿಧಿಸಲಾಗಿದೆʼ ಎಂದು ಟ್ವೀಟ್ ಮಾಡಿದ್ದಾರೆ.
10 ಸೆಕೆಂಡುಗಳ ವೀಡಿಯೊದಲ್ಲಿ, ಘೇಂಡಾಮೃಗವು ಇದ್ದಕ್ಕಿದ್ದಂತೆ ಹೆದ್ದಾರಿಗೆ ಬರುತ್ತದೆ. ಈ ವೇಳೆ ವೇಗದಲ್ಲಿ ಬಂದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಘೇಂಡಾಮೃಗ ಮೇಲೆದ್ದು ಹೋಗಲು ಪ್ರಯತ್ನಿಸಿತು. ಆದ್ರೆ, ಮತ್ತೆ ಕೆಳಗೆ ಬಿದ್ದಿತು. ನಂತ್ರ ಮತ್ತೆ ಎದ್ದು ಕಾಡಿಗೆ ಮರಳಲು ಯಶಸ್ವಿಯಾಗುವುದನ್ನು ನೋಡಬಹುದು.
Rhinos are our special friends; we’ll not allow any infringement on their space.
In this unfortunate incident at Haldibari the Rhino survived; vehicle intercepted & fined. Meanwhile in our resolve to save animals at Kaziranga we’re working on a special 32-km elevated corridor. pic.twitter.com/z2aOPKgHsx
— Himanta Biswa Sarma (@himantabiswa) October 9, 2022
ಘಟನೆ ಸಂಭವಿಸಿದ ಹಲ್ದಿಬರಿ ಕಾರಿಡಾರ್ನಲ್ಲಿನ ವೇಗದ ಮಿತಿ ಗಂಟೆಗೆ 40 ಕಿಮೀ. ಆದರೆ, ಟ್ರಕ್ ಗಂಟೆಗೆ 52 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BIGG NEWS : ನವೆಂಬರ್ 10 ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ : ಎನ್. ರವಿಕುಮಾರ್ ಮಾಹಿತಿ
BREAKING NEWS : ನೈಜೀರಿಯಾದಲ್ಲಿ ಪ್ರವಾಹಕ್ಕೆ ಸಿಲುಕಿ ಮುಳುಗಿದ ದೋಣಿ: 76 ಮಂದಿ ಸಾವು | Nigeria boat accident