ಶಿವಮೊಗ್ಗ: ಕುಡಿತ ಅನ್ನುವುದು ನಮ್ಮ ದೇಶಕ್ಕೆ ಅಗತ್ಯ ಇಲ್ಲ ನಮ್ಮ ದೇಶ ಸಮಶೀತೋಷ್ಣ ದೇಶ. ಶೇಕಡಾ 90 ರಷ್ಟು ಜನ ಮದ್ಯ ಸೇವನೆ ಮಾಡದೇ ಬದುಕುತ್ತಿದ್ದಾರೆ. ಶೇಕಡಾ 9ರಷ್ಟು ಜನರಿಂದ 23 ರಷ್ಟು ಜನರ ಸಂಸಾರ ಹಾಳು ಆಗುತ್ತಿದೆ ಎಂಬುದಾಗಿ ಸಮೀಕ್ಷೆಯಿಂದ ಬಯಲಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಗರ ತಾಲೂಕಿನ, 1981 ನೇ ಮದ್ಯ ವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅವಿನಹಳ್ಳಿ ವಲಯದ ಸಂಯುಕ್ತ ಆಶ್ರಯದಲ್ಲಿ ಚಿಪ್ಪಳಿ ಗ್ರಾಮದ ಆದಿಶಕ್ತಿ ನಗರದ ಶ್ರೀ ನಾರಾಯಣ ಗುರುಗಳ ಸಮುದಾಯ ಭವನದಲ್ಲಿ ಆಯೋಜಿಸಲಾದ 1981 ನೇ ಮದ್ಯವರ್ಜನಾ ಶಿಬಿರದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು.
ಕುಡಿತದಿಂದ ಮನೆ ಹಾಳಾಗುತ್ತಿದೆ. ಮಕ್ಕಳು ವಿದ್ಯಾಬ್ಯಾಸದಿಂದ ವಂಚಿತ ರಾಗುತ್ತಿದ್ದಾರೆ. ಇದನ್ನು ಮನಗಂಡ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮನ ಪರಿವರ್ತನೆಯ ಮೂಲಕ ಕುಡಿತದ ಚಟಕ್ಕೆ ಬಲಿಯಾದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ಸಲುವಾಗಿ ಮದ್ಯ ವರ್ಜನಾ ಶಿಬಿರಗಳನ್ನ ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಮಧ್ಯ ವ್ಯಸನಿಗಳನ್ನು ಅದರಿಂದ ಮುಕ್ತಗೊಳಿಸುತ್ತಿದ್ದಾರೆ. ಇದು ಭಗವಂತ ಮೆಚ್ಚುವ ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ. ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಂಕಲ್ಪದ ಮದ್ಯ ವರ್ಜನಾ ಶಿಬಿರದ ಮೂಲಕ ಸಾವಿರಾರು ಕುಟುಂಬಗಳಿಗೆ ಪುನರಪಿ ಬದುಕು ಕಟ್ಟಿಕೊಳ್ಳಲು ಸಾದ್ಯ ಆಗುತ್ತಿದೆ ಎಂದರು.
ಪೌಷ್ಟಿಕ ಆಹಾರವನ್ನು ನೀಡಿದರೆ ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ. ದುಷ್ಟ ಗುಣಗಳು ದೋಷಗಳು ಸಹವಾಸ ದೋಷದಿಂದ ಬರುತ್ತದೆ. ಉತ್ತಮರ ಸಹವಾಸ ಬೆಳೆಸಿಕೊಳ್ಳಬೇಕು. ತಂದೆ ಕುಡಿತದ ಚಟಗಳಿಗೆ ಬಲಿಯಾದರೆ ಮಕ್ಕಳು ಸಾಕಷ್ಟು ಹಿಂಸೆಯನ್ನ ಅನುಭವಿಸುತ್ತಾರೆ. ಗೌರವದಿಂದ ವಂಚಿತರಾಗುತ್ತಾರೆ. ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಪೋಷಕರು ಆದ್ಯತೆ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ಜಿಲ್ಲಾ ವಿಭಾಗದ ನಿರ್ದೇಶಕರಾದ ದಿನೇಶ್ ಎಂ ಮಾತನಾಡಿ ಜನ ಜಾಗೃತಿ ವೇದಿಕೆಯ ಮೂಲಕ ಆಯೋಜನೆ ಮಾಡುತ್ತಿರುವ ಮದ್ಯ ವರ್ಜನಾ ಶಿಬಿರದಿಂದ ರಾಜ್ಯದಂತ 131000 ಮಂದಿ ಹೊಸ ಬದುಕನ್ನ ಕಟ್ಟಿಕೊಂಡಿದ್ದಾರೆ. ಮನುಷ್ಯನ ದೇಹದ ಇಂಜಿನ್ ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬದುಕು, ಗೌರವ, ಆರ್ಥಿಕತೆಯನ್ನು ಕೊಡುವ ಕಾರ್ಯಕ್ರಮವೇ ಮದ್ಯವರ್ಜನ ಶಿಬಿರ ಎಂದು ಹೇಳಿದರು.
ಮುಖ್ಯ ಅತಿಥಿ ಪಾಲ್ಗೊಂಡು ಮಾತನಾಡಿದಂತ ಸಾಗರದ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ನಮಗೂ ಒಂದು ಕುಟುಂಬ, ಸಂಸಾರ ಇದೆ ಎಂಬ ಅರಿವು ಮದ್ಯ ಸೇವನೆ ಮಾಡುವ ಸದಸ್ಯರಿಗೆ ಇರಬೇಕು. ಹೆಣ್ಣು ಮಕ್ಕಳಿಗೆ ಬದುಕುವ ಚೈತನ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮೂಲಕ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದ ಮದ್ಯ ವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಕಲ್ಮನೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು, ಹೊಸ ಬದುಕನ್ನ ಕಟ್ಟಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಲ್ಮನೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಮರನಾಥ್, ಉಪಾಧ್ಯಕ್ಷೆ ಸಂಧ್ಯಾ ಗಣಪತಿ, ಸದಸ್ಯರಾದ ಸುರೇಶ್ ಗೌಡ್ರು, ಕಮಲಮ್ಮ, ಮಮತಾ, ಮಹಾಬಲೇಶ್ವರ ಮಾಪು, ಭೀಮನ ಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್ ಎಂ.ಎಸ್, ಮಾಜಿ ಅಧ್ಯಕ್ಷ ನಾಗರಾಜ್ ಎಂ, ಬಿಲ್ಲವ ಸಮಾಜದ ಉಪಾಧ್ಯಕ್ಷ ಬಿ. ಎಸ್.ಸುಂದರ್, ಅವಿನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಂತರಾಜ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ದೇವೇಂದ್ರಪ್ಪ, ಸಾಗರ ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಒಕ್ಕೂಟದ ಅಧ್ಯಕ್ಷರಾದ ದಿನೇಶ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಮಲ್ಲಿಕಾರ್ಜುನ ಹಕ್ರೆ, ಕಸ್ತೂರಿ ಸಾಗರ, ದೇವರಾಜ್ ಕುರುವರಿ, ಉದ್ಯಮಿ ವಿಠಲ್ ಪೈ ಹೆಗ್ಗೋಡು, ಕೃಷ್ಣಮೂರ್ತಿ ನೀರುಕೋಡು, ರಫೀಕ್, ಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪದಾಧಿಕಾರಿಗಳು, ಇತರರು ಹಾಜರಿದ್ದರು.
ಧರ್ಮಸ್ಥಳ ಗ್ರಾಮೀಣಾಭಿ ಯೋಜನೆಯ ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು, ಪವನ್ ಹಾಗೂ ರೂಪಾ ನಿರೂಪಿಸಿದರು. ವಲಯ ಮೇಲ್ವಿಚಾರಕಿ ಕಮಲಾಕ್ಷಿ ವಂದಿಸಿದರು.
ಶಿವಮೊಗ್ಗ: ಸಾಗರದ ‘ಗಣಪತಿ ಬ್ಯಾಂಕ್’ನಿಂದ ಗ್ರಾಹಕ ಸ್ನೇಹಿ ಯೋಜನೆ ಜಾರಿ- ಅಧ್ಯಕ್ಷ ಆರ್.ಶ್ರೀನಿವಾಸ್
ಮನುಷ್ಯ ತನ್ನ ದುರಾಸೆಯಿಂದ ಬದುಕಿನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾನೆ: ನಿವೃತ್ತ ನ್ಯಾ.ಸಂತೋಷ್ ಹೆಗಡೆ
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ