ಪ್ರತಿದಿನ ಅನೇಕ ಜನರು ಬೆಳಿಗ್ಗೆ ಚಹಾ ಮತ್ತು ಕಾಫಿ ಕುಡಿಯುತ್ತಾರೆ. ಇನ್ನು ಈ ಟೀ, ಕಾಫಿಯನ್ನ ದಿನವೂ ಕುಡಿಯಲೇಬೇಕು ಎನ್ನುವವರೂ ಇದ್ದಾರೆ. ಅಲ್ಲದೇ ಇವ್ರಿಗೆ ಬೆಳಗ್ಗೆ ಎದ್ದಾಗ ಕಾಫಿ ಕುಡಿಯದೇ ಇದ್ದರೆ ದಿನ ಕಳೆಯೋಕೆ ಆಗುವುದಿಲ್ಲ. ಅವ್ರ ಮನಸ್ಸು ಕೆಲಸ ಮಾಡುವುದಿಲ್ಲ. ಅದಲ್ಲದೇ ಕೆಲವರಿಗೆ ಬೆಳಗ್ಗೆ ಕಾಫಿ, ಟೀ ಕುಡಿಯದಿದ್ದರೆ ಬೆಳಗ್ಗೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಇನ್ನು ಈ ಚಹಾವನ್ನ ಕುಡಿಯುವ ಮೊದಲು ಅಥವಾ ಕುಡಿದ ನಂತ್ರ ಕೆಲವೊಂದು ಆಹಾರಗಳನ್ನ ತಿನ್ನಬಾರದು. ಹಾಗಾದ್ರೆ, ಅವು ಯಾವುವು.?
ಹಸಿ ಈರುಳ್ಳಿಯನ್ನ ತಿಂದ ನಂತ್ರ ಟೀ ಕುಡಿಯಬೇಡಿ. ಅದೇ ರೀತಿ ನಿಂಬೆ ರಸ ಕುಡಿದ ತಕ್ಷಣ ಟೀ ಸೇವಿಸಬಾರದು. ಹಾಗೆಯೇ ಕೆಲವರು ಕಾಫಿ ಕುಡಿಯುವಾಗ ಅಥವಾ ಕಾಫಿ ಕುಡಿದ ನಂತ್ರ ಕಡಲೆಕಾಯಿಯಿಂದ ಮಾಡಿದ ಕೆಲವು ಆಹಾರಗಳನ್ನ ತಿನ್ನುತ್ತಾರೆ. ಆದ್ರೆ, ಈ ಕಡಲೆಕಾಯಿಗಳನ್ನ ತಿನ್ನುವುದು ಮತ್ತು ಚಹಾವನ್ನು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯನ್ನ ಹಾನಿಗೊಳಿಸುತ್ತದೆ.
ಇನ್ನು ಅರಿಶಿನ ಅಥವಾ ಅರಿಶಿನದಿಂದ ಮಾಡಿದ ಭಕ್ಷ್ಯಗಳನ್ನ ತಿಂದ ತಕ್ಷಣ ಚಹಾವನ್ನು ಕುಡಿಯಬೇಡಿ. ಟೀ ಕುಡಿಯುವ ಮೊದಲು ನೀರು ಕುಡಿಯಬಹುದು. ಆದ್ರೆ, ಟೀ ಕುಡಿದ ನಂತ್ರ ನೀರು ಕುಡಿಯಬಾರದು.