ಬೆಂಗಳೂರು : ದಿನಾಂಕ: 31-05-2024ಕ್ಕೆ ಗರಿಷ್ಠ 5 ವರ್ಷ ಅವಧಿ ಪೂರ್ಣಗೊಂಡು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ‘ಬಿ’ ವೃಂದದ ಶಿಕ್ಷಕರುಗಳ ಕರಡು ಪಟ್ಟಿ ಪ್ರಕಟಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ ದಿನಾಂಕ: 31-05-2024ಕ್ಕೆ ಗರಿಷ್ಠ 05 ವರ್ಷ ಅವಧಿ ಪೂರ್ಣಗೊಂಡು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ಗ್ರೂಪ್-‘ಬಿ’ ವೃಂದದ ಶಿಕ್ಷಕರುಗಳ ಕರಡು ಪಟ್ಟಿಯನ್ನು ತಂತ್ರಾಂಶದ್ದಲಿ ಪ್ರಕಟಿಸಿರುತ್ತಾರೆ. ಸದರಿ ಕರಡು ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಿದೆ.
ಪ್ರಯುಕ್ತ ಸದರಿ ಪಟ್ಟಿಯನ್ನು ತಮ್ಮ ಕಛೇರಿಯಲ್ಲಿ ಪ್ರಕಟಿಸುವುದು. ಪ್ರಕಟಿತ ಕರಡು ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳನ್ನು ಹಾಗೂ ಸೆಕ್ಷನ್-10 ರಡಿಯಲ್ಲಿ ಕೌನ್ಸಲಿಂಗ್ ಆಧ್ಯತೆ ಸಲ್ಲಿಸಲು ದಾಖಲೆಗಳನ್ನು ದಿನಾಂಕ: 15-04-2024 ರ ವರೆಗೆ ನೀಡುವುದು. ಆಕ್ಷೇಪಣೆ ಮತ್ತು ಆದ್ಯತೆಗಳ ಪೂರಕ ದಾಖಲೆ ಸಹಿತ ದಿನಾಂಕ: 15-04-2024 ರಂದು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ.