ಶಿವಮೊಗ್ಗ: ಜಿಲ್ಲೆಯ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ.ನಾಗೇಂದ್ರಪ್ಪ ಅವರು ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಸ್ತ್ರೀ ರೋಗ ತಜ್ಞ ಡಾ.ನಾಗೇಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಕೆಎನ್ಎನ್ ಸಂಸ್ಥೆಯಿಂದಲೂ ಅಭಿನಂದನೆ, ಶುಭಾಶಯಗಳನ್ನು ತಿಳಿಸುತ್ತಿದೆ.
ಈ ಹಿಂದೆಯೇ ಹಲವು ಹುದ್ದೆ ನಿರ್ವಹಿಸಿದ್ದ ಡಾ.ನಾಗೇಂದ್ರಪ್ಪ, ಡಿಹೆಚ್ಓ, ಡಿಎಸ್ಓಗೆ ಧನ್ಯವಾದ
ಶಿವಮೊಗ್ಗ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಲ್ಲಿ ವಿವಿಧ ಪದಾಧಿಕಾರಿಯ ಹುದ್ದೆಯನ್ನು ಡಾ.ನಾಗೇಂದ್ರಪ್ಪ ನಿರ್ವಹಿಸಿದ್ದರು. ಆ ಬಳಿಕ ಇದೀಗ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಮ್ಮ ಅವಿರೋಧ ಆಯ್ಕೆಯ ಹಿಂದೆ ಮೆಗ್ಗಾನ್ ಜಿಲ್ಲಾ ಸರ್ಜನ್ ಹಾಗೂ ಈ ಹಿಂದಿನ ನಿಕಪೂರ್ವ ಜಿಲ್ಲಾಧ್ಯಕ್ಷರಾದಂತ ಡಾ.ಸಿದ್ದನಗೌಡ ಪಾಟೀಲ್ ಅವರು ಕಾರಣವೆಂದು ಡಾ.ನಾಗೇಂದ್ರಪ್ಪ ಸ್ಮರಿಸಿದ್ದಾರೆ. ಜೊತೆಗೆ ಶಿವಮೊಗ್ಗ ಡಿಹೆಚ್ಓ ಡಾ.ನಟರಾಜ್ ನಾಯ್ಕ್, ಡಿಎಸ್ಓ ಡಾ.ನಾಗರಾಜ್ ಹಾಗೂ ಡಿಹೆಚ್ಓ ಕಚೇರಿಯ ಅಧಿಕಾರಿ ಡಾ.ಗುಡ್ಡಪ್ಪ ಕಸವಿ ಅವರಿಗೆ ಧನ್ಯವಾದವನ್ನು ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪನವರ ಆ ಒಂದು ಮಾತಿಗೆ 5 ವರ್ಷ ಉಚಿತ ಶಿಕ್ಷಣ ಪಡೆದ್ರು ಡಾ.ನಾಗೇಂದ್ರಪ್ಪ
ಸೊರಬ ತಾಲ್ಲೂಕಿನ ಜೇಡಗೇರಿ ಗ್ರಾಮದ ರೈತಾಪಿ ಕುಟುಂಬದಲ್ಲಿ ಹುಟ್ಟಿದಂತ ಡಾ.ನಾಗೇಂದ್ರಪ್ಪ ಬಾಲ್ಯದಲ್ಲೇ ವ್ಯಾಸಂಗದಲ್ಲಿ ಚುರುಕಿನಿಂದ ಕೂಡಿದ್ದರು. ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದಂತ ಡಾ.ನಾಗೇಂದ್ರಪ್ಪ ಅವರನ್ನು ವೈದ್ಯರನ್ನಾಗಿ ಮಾಡಬೇಕು ಎಂಬ ಕನಸನ್ನು ತಂದೆ ತಂಡಿಗೆ ರಂಗಪ್ಪ ಕಂಡಿದ್ದರು. ಆ ಕಾರಣಕ್ಕಾಗಿಯೇ ಅಂದು ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪನವರ ಬಳಿಗೆ ತೆರಳಿ ತಮ್ಮ ಮಗನನ್ನು ಪರಿಚಯಿಸಿ, ವೈದ್ಯಕೀಯ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿದ್ದರು.
ಡಾ.ನಾಗೇಂದ್ರಪ್ಪ ಅವರ ತಂದೆ ತಂಡಿಗೆ ರಂಗಪ್ಪ ಅವರು ಎಸ್.ಬಂಗಾರಪ್ಪ ಬಳಿಯಲ್ಲಿ ಹೇಳಿದ್ದೇ ತಡ, ಒಂದು ಕ್ಷಣವೂ ಯೋಜಿಸದೇ ಆರ್.ಎಲ್ ಜಾಲಪ್ಪ ಅವರಿಗೆ ನಾಗೇಂದ್ರಪ್ಪ ಅವರಿಗೆ ವೈದ್ಯಕೀಯ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡುವಂತೆ ತಿಳಿಸಿದರು. ಹೀಗಾಗಿ ಎಂಬಿಬಿಎಸ್ ವ್ಯಾಸಂಗವನ್ನು ಐದು ವರ್ಷ ಒಂದೇ ಒಂದು ರೂಪಾಯಿ ಶುಲ್ಕ ಪಡೆಯದೇ ಕೋಲಾರದಲ್ಲಿನ ದೇವರಾಜು ಅರಸ್ ಮೆಡಿಕಲ್ ಕಾಲೇಜಿನಲ್ಲಿ ಡಾ.ನಾಗೇಂದ್ರಪ್ಪ ವ್ಯಾಸಂಗ ಮಾಡುವಂತಾಯ್ತು.
ಎಂಬಿಬಿಎಸ್ ಬಳಿಕ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಡಾ.ನಾಗೇಂದ್ರಪ್ಪ ಅವರು ಎಂ.ಎಸ್ ವ್ಯಾಸಂಗ ಮಾಡಿದರು. ಎಂಎಸ್ ಬಳಿಕ ಮೊದಲ ಬಾರಿಗೆ ಸ್ತ್ರೀ ರೋಗ ತಜ್ಞ ವೈದ್ಯರಾಗಿ ಡಾ.ನಾಗೇಂದ್ರಪ್ಪ ಮಾರ್ಚ್ 2000ರಲ್ಲಿ ಸಿದ್ಧಾಪುರದಲ್ಲಿ ವೃತ್ತಿ ಜೀವನನ್ನು ಆರಂಭಿಸಿದರು. ಆ ಬಳಿಕ ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ, 2017ರಿಂದ ಸಾಗರದ ಉಪ ವಿಭಾಗೀಯ ಆಸ್ಪತ್ರೆ, ಆ ಬಳಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞ ವೈದ್ಯರಾಗಿ ಡಾ.ನಾಗೇಂದ್ರಪ್ಪ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 17 ವರ್ಷಗಳಿಂದ ಡಾ.ನಾಗೇಂದ್ರಪ್ಪ ಅವರು ಸ್ತ್ರೀ ರೋಗ ತಜ್ಞ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆ ಮೂವರಿಗೆ ತಾನು ಸದಾ ಚಿರಋಣಿಯೆಂದ ಡಾ.ನಾಗೇಂದ್ರಪ್ಪ
ನಾನು ವೈದ್ಯನಾಗಲು ಮೊದಲು ಕಾರಣ ನಮ್ಮ ತಂದೆ ತಂಡಿಗೆ ರಂಗಪ್ಪ. ಅವರನ್ನು ನಾನೆಂದಿಗೂ ಮರೆಯೋದಿಲ್ಲ. ಆ ಬಳಿಕ ನನಗೆ ಎಂಬಿಬಿಎಸ್ ವ್ಯಾಸಂಗ ಮಾಡೋದಕ್ಕೆ ಅನುಕೂಲ ಮಾಡಿಕೊಟ್ಟವರು ದಿವಂಗತ ಎಸ್.ಬಂಗಾರಪ್ಪನವರು. ಅವರು ವೈದ್ಯಕೀಯ ಸೀಟು ಕೊಡಿಸದೇ ಇದ್ದರೇ ಇಂದು ನಾನು ಎಲ್ಲಿ ಇರ್ತಾ ಇದ್ದೆನೋ ಗೊತ್ತಿಲ್ಲ ಎನ್ನುತ್ತಾರೆ ಡಾ.ನಾಗೇಂದ್ರಪ್ಪ.
ಇನ್ನೂ ನನಗೆ ಐದು ವರ್ಷ ಎಂಬಿಬಿಎಸ್ ವ್ಯಾಸಂಗವನ್ನು ಒಂದೇ ಒಂದು ರೂಪಾಯಿ ಪಡೆಯದೇ ಎಸ್.ಬಂಗಾರಪ್ಪ ಹೇಳಿದ ಕಾರಣಕ್ಕೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಆರ್.ಎಲ್ ಜಾಲಪ್ಪ ಅವರು. ಅವರಿಗೆ ನಾನು ಇಂದಿಗೂ ಚಿರಋಣಿ ಎಂಬುದಾಗಿ ತಿಳಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ: ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ- ಸಚಿವ ಎಂ.ಬಿ ಪಾಟೀಲ್








