ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿಯಿಂದ ಜೈದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾಕ್ಟರ್ ಮಂಜುನಾಥ್ ಸ್ಪರ್ಧಿಸಲಿದ್ದು ಇದೇ ವಿಚಾರವಾಗಿ ಡಿಕೆ ಸುರೇಶ್ ಅವರು ಬೆಳಿಗ್ಗೆ ಮಾತನಾಡಿದರು. ಡಿಕೆ ಸುರೇಶ್ ಅವರ ಹೇಳಿಕೆಗೆ ಪರೋಕ್ಷವಾಗಿ ಹೆಚ್‍ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಡಾಕ್ಟರ್ ಮಂಜುನಾಥ್ ಸಾಧನೆಯ ಮುಂದೆ ಆತ ಉಂಗುಷ್ಟಕ್ಕೂ ಸಮನಲ್ಲ ಎಂದು ತಿರುಗೇಟು ನೀಡಿದ್ದಾರೆ.
BREAKING: ‘ರಾಜ್ಯ ಸರ್ಕಾರ’ದಿಂದ ಎಲ್ಲಾ ‘ಸಹಕಾರ ಸಂಘ, ಬ್ಯಾಂಕು’ಗಳ ‘ಚುನಾವಣೆ ಮುಂದೂಡಿಕೆ’ ಮಾಡಿ ಆದೇಶ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಸ್ಪರ್ಧಿಸಲು ಮಂಜುನಾಥ್ ಗೆ ಒತ್ತಡ ಹಾಕಿದ್ದು ನಾನೇ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು. ಎರಡು ಗಂಟೆಗಳ ಕಾಲ ತಂದೆಯವರ ಮೇಲೆ ಒತ್ತಡ ಹಾಕಿದ್ದು ನಾನೆ ಎಂದು ತಿಳಿಸಿದರು.
BREAKING : ‘ರಾಮೇಶ್ವರಂ ಕೆಫೆ’ ಬಾಂಬ್ ಸ್ಪೋಟ ಪ್ರಕರಣ : 4 ವರ್ಷಗಳ ಹಿಂದೆಯೇ ಸ್ಫೋಟಕ್ಕೆ ನಡೆದಿತ್ತು ಭಾರಿ ಸಂಚು
ಇವತ್ತು ಒಬ್ಬ ವ್ಯಕ್ತಿ ಸಿಎಂ ಮಂಜುನಾಥ್ ಬಗ್ಗೆ ಮಾತನಾಡಿದ್ದಾರೆ.ಮಂಜುನಾಥ್ ಸಾಧನೆಯ ಮುಂದೆ ಆತ ಉಂಗುಷ್ಟಕ್ಕೂ ಸಮನಲ್ಲ.ಅವರು ಗೆದ್ದಿರಬಹುದು ಆದರೆ ಅವರ ಸಾಧನೆ ಏನು? ಎಂದು ಎಚ್ ಡಿ ಕೆ ಪ್ರಶ್ನಿಸಿದರು.ಮಂಜುನಾಥ ಬಗ್ಗೆ ನೀಡಿರುವ ಹೇಳಿಕೆ ನನಗೆ ನೋವುಂಟು ಮಾಡಿದೆ.ನಮ್ಮ ಬಗ್ಗೆ ಮಾತನಾಡಿ ರಾಜಕೀಯವಾಗಿ ಎದುರಿಸುತ್ತೇವೆ.ಡಾಕ್ಟರ ಮಂಜುನಾಥ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗೆ ಇಲ್ಲ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
Viral Puzzle : ನೀವು ನಿಜವಾಗ್ಲೂ ಬುದ್ದಿವಂತರಾ.? ಹಾಗಿದ್ರೆ, ಈ ಫೋಟೋ ನೋಡಿ, ಹುಡುಗಿಯ ಹೆಸರೇನು ಹೇಳಿ!