ಬೆಂಗಳೂರು: ರಾಜ್ಯ ಸರ್ಕಾರದಿಂದ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿದ್ದಂತ ಡಾ.ಯೋಗೇಶ್ ಬಾಬು ಅವರಿಗೆ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಇಂತಹ ಹುದ್ದೆಯನ್ನು ಮಾ.11ರಂದು ಪದಗ್ರಹಣ ಮಾಡಲಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ನಿಷ್ಠಾಪಂತ ಕಾರ್ಯಕರ್ತ ಡಾ.ಬಿ ಯೇಗೇಶ್ ಬಾಬು ಅವರನ್ನು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದರು.
ಡಾ.ಬಿ ಯೋಗೇಶ್ ಬಾಬು ಅವರು ನೂತನವಾಗಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರಾಗಿ ನೇಮಕವಾದಂತ ಹುದ್ದೆಗೆ ದಿನಾಂಕ 11-03-2024ರಂದು ಅಧಿಕಾರ ಪದಗ್ರಹಣ ಮಾಡಲಿದ್ದಾರೆ.
ಮಾ.11ರಂದು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಇರುವಂತ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಕಚೇರಿಯಲ್ಲಿ ಅಧ್ಯಕ್ಷರಾಗಿ ಡಾ.ಬಿ ಯೋಗೇಶ್ ಬಾಬು ಅಧಿಕಾರ ಸ್ವೀಕರಿಸಲಿದ್ದಾರೆ.
ರಾಜ್ಯದಲ್ಲಿ ‘ಕಾಂಗ್ರೆಸ್ ಸರ್ಕಾರ 10 ವರ್ಷ’ ಅಧಿಕಾರದಲ್ಲಿ ಇರುತ್ತೆ: ಸಚಿವ ರಾಮಲಿಂಗಾರೆಡ್ಡಿ ಭವಿಷ್ಯ
ಬೆಂಗಳೂರು ಜನತೆಗೆ ಬಿಗ್ ರಿಲೀಫ್: ಮಾ.15ರ ನಂತ್ರ ಅನ್ಯ ಉದ್ದೇಶಕ್ಕೆ ನೀರು ಬಳಸಿದ್ರೆ 5,000 ದಂಡ