ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಜೋಡಿ ಕೊಲೆಯಾಗಿದೆ. ಗಂಡನಿಂದಲೇ ಪತ್ನಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
BIGG NEWS: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ABCD ಕಲಿಸದ ಶಿಕ್ಷಕಿ: ಸ್ಕೂಲ್ ಪರಿಸ್ಥಿತಿ ಕಂಡು ಶಾಕ್ ಆದ ಎಸಿ
24 ವರ್ಷದ ಕವಿತಾ ಹಾಗೂ 4 ವರ್ಷದ ಮಗ ಜೀವನ್ ಕೊಲೆಯಾದವರು. ಕವಿತಾಳ ಗಂಡ ಸ್ವಾಮಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಗಲಾಟೆ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಆರೋಪಿ ಸ್ವಾಮಿಯನ್ನು ಹಿಡಿದು ತಪ್ಪಿಸಿಕೊಳ್ಳಬಾರದು ಎಂದು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಚೇಳೂರು ಸಬ್ ಇನ್ಸ್ ಪೆಕ್ಟರ್ , ಗುಬ್ಬಿ ಸರ್ಕಲ್ ಇನ್ಸ್ ಪೆಕ್ಟರ್ ನದಾಫ್ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.