ಬೆಂಗಳೂರು : ಬೆಂಗಳೂರಿನ ಸಾರಕ್ಕಿ ಬಳಿ ಇರುವ ಪಾರ್ಕ್ ನಲ್ಲಿ ಜೋಡಿ ಕೊಲೆಯಾಗಿದ್ದು ಕೊಲೆಯಾದವರನ್ನು ಸುರೇಶ ಹಾಗೂ ಅನುಷಾ ಎಂದು ಹೇಳಲಾಗುತ್ತಿದೆ. ಸಂಜೆ 4:15ರ ಸುಮಾರಿಗೆ ಕಲ್ಲು ಎತ್ತಿ ಹಾಕಿ ಜೋಡಿ ಕೊಲೆ ಮಾಡಲಾಗಿದೆ.
ಕೊಲೆಯಾದ ಸುರೇಶ್ (46) ಅನುಷಾ (25) ಇಬ್ಬರು ಪರಿಚಿತರು ಎಂದು ಹೇಳಲಾಗುತ್ತಿದೆ. ಸುರೇಶಗೆ ಮದುವೆಯಾಗಿದ್ದರು ಕೂಡ ಅನುಷಾ ಸಂಬಂಧ ಹೊಂದಿದ್ದಳು. ಗುರುಗುಂಟೆಪಾಳ್ಯದ ನಿವಾಸಿ ಸುರೇಶ್ ಹಾಗೂ ಶಾಕಾಂಬರಿ ನಗರದ ನಿವಾಸಿ ಅನುಷ ಎಂದು ಹೇಳಲಾಗುತ್ತಿದೆ.
ಆದರೆ ಅನುಷಾಗೆ ಸಂಬಂಧವನ್ನು ಮುಂದುವರಿಸಲು ಇಷ್ಟ ಇರಲಿಲ್ಲ ಇಂದು ಭೇಟಿಯಾಗಿ ಸಂಬಂಧ ಕಡಿತ ಮಾಡುವ ನಿರ್ಧಾರವನ್ನು ಮಾಡಿದ್ದರು. ಆದರೆ ಅನುಷಾ ತನ್ನ ಕೈ ತಪ್ಪಿ ಹೋಗ್ತಾಳೆ ಎಂದು ಸುರೇಶ್ ಕೋಪಗೊಂಡಿದ್ದ. ಕೋಪಗೊಂದು ಆರೋಪಿ ಸುರೇಶ್ ಅನುಷಾಗೆ ಚಾಕುವಿನಿಂದ ಹಿಡಿದಿದ್ದಾನೆ ಅನುಷಾ ತಾಯಿ ಗೀತಾ ಅಡ್ಡಿಪಡಿಸಿದರೂ ಕೂಡ ಸುರೇಶ್ ಚಾಕು ಇರಿದಿದ್ದಾನೆ.
ಈ ವೇಳೆ ಸಿಮೆಂಟ್ ಇಟ್ಟಿಗೆಯನ್ನು ಸುರೇಶ್ ತಲೆ ಮೇಲೆ ಗೀತಾ ಎತ್ತಿ ಹಾಕಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಹಾಗೂ ಅನುಷಾ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದೀಗ ಅನುಷಾ ತಾಗಿದಳ ನೌಶಕ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಜೆಪಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೆಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.