ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಭಗವಾನ್ ( Director Bhagavan ) ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.
ಭಗವಾನ್ ಆರೋಗ್ಯದಲ್ಲಿ ಏರುಪೇರಾಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆಯಿಂದ 3 ದಿನದ ಹಿಂದೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ, ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿದೆ.
ದೊರೈ-ಭಗವಾನ್ ಅವರು ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೊಸಬೆಳಕು, ಭಾಗ್ಯೋದಯ, ಮಂಗಳಸೂತ್ರ, ರೌಡಿ ರಂಗಣ್ಣ, ವಸಂತ ಗೀತೆ, ಸೂತ್ರಧಾರ, ವಸಂತ ಗೀತೆ, ಹಾಲು ಜೇನು, ಜೀವನ ಚೈತ್ರಾ, ಬೆಂಗಳೂರು ಮೇಲ್ ನಂತಹ ಕೆಲವು ಚಿತ್ರಗಳಲ್ಲಿಯೂ ಭಗವಾನ್ ನಟಿಸಿದ್ದಾರೆ.
ಅವರು ಹೆಚ್ಚಾಗಿ ಸಂಗೀತ ನಿರ್ದೇಶಕ ಜೋಡಿ ರಾಜನ್-ನಾಗೇಂದ್ರ ಮತ್ತು ಜಿ.ಕೆ.ವೆಂಕಟೇಶ್ ಅವರೊಂದಿಗೆ ತಮ್ಮ ಹೆಚ್ಚಿನ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ಪ್ರತಿಭಾವಂತ ನಿರ್ದೇಶಕ ದೊರೈ ಭಗವಾನ್ ಬೇಗ ಹುಷಾರಾಗಿ ಬರಲೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
BREAKING NEWS : ಬೆಳಗಾವಿ ಗಡಿ ನುಗ್ಗಲು ಯತ್ನಿಸಿದ ಶಿವಸೇನೆ ಪುಂಡರು ಪೊಲೀಸ್ ವಶಕ್ಕೆ
BREAKING: ಅಮಾನತು ಆದೇಶ ಪ್ರಶ್ನಿಸಿ ಕೆ.ಶ್ರೀನಿವಾಸ್ ಹೈಕೋರ್ಟ್ ಗೆ ಅರ್ಜಿ: ಸರ್ಕಾರಕ್ಕೆ, ಚುನಾವಣಾ ಆಯೋಗಕ್ಕೆ ನೋಟಿಸ್