ಬೆಂಗಳೂರು: ಮಂಕಿಪಾಕ್ಸ್ ವಿಶ್ವದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಮಂಕಿಪಾಕ್ಸ್ ಬಗ್ಗೆ ಜನರಲ್ಲಿ ಆತಂಕ, ಭಯ ಕೂಡ ಮನೆ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರವು ಮಂಕಿಪಾಕ್ಸ್ ಬಗ್ಗೆ ಆತಂಕ ಬೇಡ, ಈ ಎಚ್ಚರಿಕೆ ವಹಿಸುವಂತೆ ತಿಳಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಲಾಗಿದ್ದು, ಎಂ ಪಾಕ್ಸ್ ಎಂಬುದು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ ಝೂನೋಟಿಕ್ ಕಾಯಿಲೆಯಾಗಿದೆ. ಈ ರೋಗವು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ/ದೈಹಿಕ/ಲೈಂಗಿಕ ಸಂಪರ್ಕ ಮತ್ತು ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳು, ಶರೀರದ ಮೇಲಿನ ದದ್ದುಗಳ ಸ್ರಾವಗಳ ಮೂಲಕ ಹರಡಬಹುದು ಎಂದಿದೆ.
ಮಂಕಿಪಾಕ್ಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ವೈಯಕ್ತಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ/ಲೈಂಗಿಕ ಸಂಪರ್ಕವನ್ನು ತಪ್ಪಿಸಿ ಎಂದು ತಿಳಿಸಿದೆ.
ಎಂ ಪಾಕ್ಸ್ ಎಂಬುದು ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುವ ವೈರಲ್ ಝೂನೋಟಿಕ್ ಕಾಯಿಲೆಯಾಗಿದೆ. ಈ ರೋಗವು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ/ದೈಹಿಕ/ಲೈಂಗಿಕ ಸಂಪರ್ಕ ಮತ್ತು ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳು, ಶರೀರದ ಮೇಲಿನ ದದ್ದುಗಳ ಸ್ರಾವಗಳ ಮೂಲಕ ಹರಡಬಹುದು.
ಮಂಕಿಪಾಕ್ಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ವೈಯಕ್ತಿಕ… pic.twitter.com/rGY8FaS0TW
— DIPR Karnataka (@KarnatakaVarthe) September 9, 2024
ಹೀಗಿವೆ ಮಂಕಿಪಾಕ್ಸ್ ರೋಗದ ಲಕ್ಷಣಗಳು
ಮಂಕಿಪಾಕ್ಸ್ ರೋಗದ ಲಕ್ಷಣಗಳೆಂದರೇ 2-4 ವಾರಗಳವರೆಗೆ ದದ್ದುಗಳು, ಊದಿಕೊಂಡ ದುಗ್ದರಸ ಗ್ರಂಥಿಗಳು, ಜ್ವರ ಇರಲಿದೆ ಅಂತ ಹೇಳಿದೆ.
ತಲೆನೋವು, ಸ್ನಾಯುನೋವು, ಬೆನ್ನುನೋವು, ನಿಶಕ್ತಿ, ಚಳಿಯಂತ ಮೇಲಿನ ಲಕ್ಷಣಗಳು ಇರಲಿದ್ದಾವೆ. ಇವುಗಳು ಕಂಡು ಬಂದರೇ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯರಿಂದ ಸಲಹೆ ಪಡೆದು ಸೂಕ್ತ ರೀತಿಯ ಚಿಕಿತ್ಸೆ ಪಡೆದ್ರೇ ಮಂಕಿಪಾಕ್ಸ್ ವಾಸಿಯಾಗಲಿದೆ. ಯಾರು ಆತಂಕ ಪಡಬೇಡಿ, ಈ ಎಚ್ಚರಿಕೆ ವಹಿಸಿ ಎಂದಿದೆ.
ಮಂಕಿಪಾಕ್ಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ವೈಯಕ್ತಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ/ಲೈಂಗಿಕ ಸಂಪರ್ಕವನ್ನು ತಪ್ಪಿಸಿ.
ಮಂಕಿಪಾಕ್ಸ್ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ.#monkeypox @CMofKarnataka @siddaramaiah… pic.twitter.com/6JvLqzIb3S
— DIPR Karnataka (@KarnatakaVarthe) September 9, 2024
ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 83,404 ಗಣೇಶ ಮೂರ್ತಿ ವಿಸರ್ಜನೆ: ಬಿಬಿಎಂಪಿ ಮಾಹಿತಿ
ಡಿಸಿಎಂ ಡಿಕೆಶಿ ವಾರ್ನಿಂಗ್ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್: ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು