ಬೆಂಗಳೂರು: ಕುರ್ಚಿ ಆಸೆಗಾಗಿ ಕೆಲಸ ಮಾಡಬೇಡಿ ಅಂತ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್`ಸರ್ವೋದಯ ಸಮಾವೇಶ’ದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮತನಾಡಿ ಯಾರೇ ಆದರೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿ, ಕುರ್ಚಿ ಆಸೆಗಾಗಿ ಕೆಲಸ ಮಾಡಬೇಡಿ ಅಂತ ತಿಳಿಸಿದರು.
ಇನ್ನೂ 70 ವರ್ಷದಲ್ಲಿ ಏನು ಮಾಡಿದ್ರಿ ಅಂತ ಕೇಳುತ್ತಾರೆ, ನಾವು ಏನೇ ಮಾಡದೇ ಹೋಗಿದ್ದರೇ ದೇಶ ಹೇಗೆ ಉಳಿಯಲು ಸಾಧ್ಯ ಅಂತ ಪ್ರಶ್ನೆ ಮಾತನಾಡಿದರು, ಇನ್ನೂ ಅಂಬೇಡ್ಕರ್ ಸಂವಿಧಾನ ಉಳಿದರೆ ದೇಶ ಉಳಿಯುತ್ತೆ, ಸಂವಿಧಾನ ಇದ್ರೆ ಮಾತ್ರ ಮೋದಿ, ಅಮಿತ್ ಶಾ ಉಳಿದುಕೊಳ್ಳುವುದಕ್ಕೆ ಸಾಧ್ಯ ಅಂತ ಹೇಳಿದರು.
ಇನ್ನೂ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶ ಉಳಿಯಬೇಕು ಈ ನಿಟ್ಟಿನಲ್ಲಿ, ಇರುವ ಕೆಟ್ಟ ಸರ್ಕಾರಗಳನ್ನ ಕಿತ್ತೊಗೆಯಿರಿ ಅಂತ ಜನತೆಗೆ ಕರೆ ನೀಡಿದರು.