ಯಾದಗಿರಿ : ಬರಿ ನರೇಂದ್ರ ಮೋದಿಗೆ ಯಾಕೆ ಬೈತೀರಾ ಅಂತ ಕೆಲವರು ಹೇಳುತ್ತಾರೆ ಮೋದಿ ನನ್ನದೇ ಗ್ಯಾರಂಟಿ ಅಂತಾನೆ ಅದಕ್ಕೆ ಮೋದಿಗೆ ತಾನೇ ಹೇಳಬೇಕು. ಹಾಗಾಗಿ ನರೇಂದ್ರ ಮೋದಿ ಅಂತ ಕೆಟ್ಟ ವ್ಯಕ್ತಿಗೆ ವೋಟ್ ಹಾಕಬೇಡಿ ಎಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ಲಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ AICC ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನನ್ನದು 56 ಇಂಚಿನ ಎದೆ ಇದೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜಾಮರ ಕಾಲದಲ್ಲೇ ಮಂಗಳಸೂತ್ರ ತೆಗೆದುಕೊಳ್ಳಲು ಆಗಿಲ್ಲ.ಪ್ರಧಾನಿ ಮೋದಿ ಕೇವಲ ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಗಾಂಧೀಜಿ ಡಾ. ಅಂಬೇಡ್ಕರ್ ನಿವಾಸದಲ್ಲಿ ಜಾಸ್ತಿ ಜನ ಮಕ್ಕಳಿದ್ದರು ಎಂದರು.
ನಾವು ಅಧಿಕಾರದಲ್ಲಿದ್ದಾಗ ಮಂಗಳಸೂತ್ರ ಕಿತ್ತುಕೊಳ್ಳೋಕೆ ಬಂದ್ರ? 55 ವರ್ಷಗಳ ಕಾಲ ನಾವು ಅಧಿಕಾರದಲ್ಲಿದ್ದಾಗ ಯಾರಾದರೂ ಬಂದ್ರ? ಕಾಂಗ್ರೆಸ್ ಬಂದರೆ ಆಸ್ತಿ ಕೀತ್ತುಕೊಳ್ಳುತ್ತಾರೆ ಅಂತ ಸುಳ್ಳು ಹೇಳುತ್ತಾರೆ.ನಾವು ಅಧಿಕಾರಕ್ಕೆ ಬಂದರೆ ಐದು ನ್ಯಾಯ 25 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.