ಮಂಡ್ಯ : ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಅವರೊಂದಿಗೆ ಎಚ್ಡಿ ದೇವೇಗೌಡರು ಮಾತನಾಡಿದ್ದಾರೆ. ನಾನು ಮಣ್ಣಿಗೆ ಹೋಗುವುದರೊಳಗೆ ಕಾವೇರಿ ನೀರಿನ ಸಮಸ್ಯೆ ಇತ್ಯರ್ಥ ಆಗಬೇಕು. ಕಾವೇರಿ ನೀರಿನ ಸಮಸ್ಯೆ ಬಗ್ಗೆ ಹರಿಸಲು ಎಚ್ ಡಿ ದೇವೇಗೌಡರು ಶಪಥ ಮಾಡಿದ್ದಾರೆ. ಹಾಗಾಗಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಕೇಂದ್ರ ಸಚಿವರಾಗಿ ಆಯ್ಕೆಯಾದ ಬಳಿಕ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ಒಂದು ಸಮಾರಂಭದಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ನನ್ನ ಬಗ್ಗೆ ಏನು ಬೇಕಾದರೂ ಮಾತನಾಡಿಕೊಳ್ಳಿ, ಆದರೆ ಎಚ್ ಡಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದರು.
ಜನ ಆಶೀರ್ವಾದದಿಂದ ದೇವೇಗೌಡರು 90ರ ವಯಸ್ಸಿನಲ್ಲಿ ಬದುಕಿದ್ದಾರೆ. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ. ರಾಜ್ಯದ ಅಭಿವೃದ್ಧಿಗಾಗಿ ನನ್ನ ಸಹಕಾರ ಇದೆ ಉಪಯೋಗಿಸಿಕೊಳ್ಳಿ ಎಂದರೆ ನನ್ನ ಜನತಾದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ನಿರ್ಬಂಧಿಸಿದ್ರು. ರಾಜ್ಯ ಸರ್ಕಾರ ಸಣ್ಣತನದ ರಾಜಕಾರಣ ಮಾಡುತ್ತಿದೆ. ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಸರ್ವಪಕ್ಷ ಸಭೆ ಕರೆದಿದ್ದಾರೆ ಆದರೆ ರಾಜ್ಯದ ಅಧಿಕಾರಿಗಳ ಜೊತೆ ಮಾತನಾಡಲು ಅಧಿಕಾರ ಇಲ್ಲವಾದರೆ ರಾಜ್ಯದ ಪರವಾಗಿ ಹೇಗೆ ಕೆಲಸ ಮಾಡಲಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ ಆಂಧ್ರದ ಸಿಎಂ ಫೋನ್ ಮಾಡಿ ಸಹಕಾರ ಕೇಳುತ್ತಾರೆ ಆದರೆ ನಮ್ಮ ರಾಜ್ಯದಲ್ಲಿ ಯಾಕೆ ಬರ್ತೀಯಪ್ಪ ಅಂತ ಕೇಳ್ತಾರೆ ನನ್ನ ಮಂತ್ರಿ ಮಾಡಿದ ಕೀರ್ತಿ ರಾಜ್ಯದ ಜನತೆಗೆ ಸಲ್ಲಬೇಕು ಎಂದು ತಿಳಿಸಿದರು
ಎಸ್ಸಿ ಎಸ್ಟಿ ಹಣ ಲೂಟಿ ಹೊಡೆದು ರಾಜಾರೋಷವಾಗಿ ಓಡಾಟ ನಡೆಸುತ್ತಿದ್ದಾರೆ. ಅಂತಹ ಬಂಢತನದ ರಾಜಕಾರಣ ನಾನು ಮಾಡುವುದಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.ಜೆಡಿಎಸ್ ನಿರ್ನಾಮ ಮಾಡಿದ್ದೇವೆ ಎಂಬ ನಿಮ್ಮ ಅಹಂಕಾರದ ಮಾತುಗಳು ನಾನು ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಮಾಡಿತು.
ಜೆಡಿಎಸ್ ಪಕ್ಷವನ್ನು ಬಿಜೆಪಿ ಮುಂದೆ ಮಂಡಿಯೂರಿಸಿದ್ದಾರೆ ಬನ್ನಿ ನಮ್ಮ ಪಕ್ಷಕ್ಕೆ ಎಂದು ಕನಕಪುರದ ಸ್ನೇಹಿತರು ಹೇಳಿದ್ದರು. ಜೆಡಿಎಸ್ ಪಕ್ಷ ಕಟ್ಟಿದ್ದು ಎಚ್ ಡಿ ದೇವೇಗೌಡರು. 90ನೇ ವಯಸ್ಸಿನಲ್ಲಿ ಹಲವು ಘಟನೆಗಳು ನಡೆದಿವೆ ನೋವಿನ ನಡುವೆ ರಾಜ್ಯದ ಅಭಿವೃದ್ಧಿ ಅವರ ಹೃದಯದಲ್ಲಿದೆ.ನನ್ನ ಬಗ್ಗೆ ಏನು ಬೇಕಾದರೂ ಮಾತಾಡಿ ಆದರೆ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದರು.