ಶಿವಮೊಗ್ಗ: ಮಂಗಳವಾರ ನಡೆಯಲಿರುವ ಕಾಮದಹನ ಕಾರ್ಯಕ್ರಮದ ಸಂದರ್ಭದಲ್ಲಿ ಡಾಂಬರ್ ರಸ್ತೆಗಳ ಮೇಲೆಯೇ ಕಾಮದಹನ ನಡೆಸುವುದರಿಂದ ಸಾರ್ವಜನಿಕ ರಸ್ತೆಗಳು ಹಾನಿಗೊಳಗಾಗುವ ಸಾಧ್ಯತೆ ಇರುವುದರಿಂದ ರಸ್ತೆ ಮೇಲ್ಮೈ ಮೇಲೆ ಕಾಮದಹನ ಮಾಡಬಾರದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪರಶುರಾಮ ಕೆ.ಎಂ. ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಇತ್ತೀಚಿನ ದಿನಗಳಲ್ಲಿ ಡಾಂಬರ್ ರಸ್ತೆಗಳ ಮೇಲೆ ಕಾಮದಹನ ನಡೆಸುವ ಘಟನೆಗಳು ಗಮನಕ್ಕೆ ಬಂದಿವೆ. ಬೆಂಕಿಯ ತೀವ್ರ ಉಷ್ಣದಿಂದ ಡಾಂಬರ್ ಕರಗುವುದು. ಮೇಲ್ಮೈ ಬಿರುಕು ಬಿಟ್ಟಿರುವುದು ಹಾಗೂ ರಸ್ತೆ ಹಾಳಾಗುವುದು ಸಾಮಾನ್ಯ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವುದಲ್ಲದೆ ಅಪಘಾತಗಳ ಸಂಭವವೂ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ರಸ್ತೆ ದುರಸ್ತಿ ಕಾರ್ಯಕ್ಕೆ ಸಾರ್ವಜನಿಕರ ಹಣವೇ ಬಳಸಲಾಗುವುದರಿಂದ ಇಂಥಹ ಅನಾವಶ್ಯಕ ಹಾನಿಯನ್ನು ತಪ್ಪಿಸಲು ಭಕ್ತಾದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಕಾಮದಹನವನ್ನು ರಸ್ತೆ ಬದಿಯ ಖಾಲಿ ಜಾಗಗಳಲ್ಲಿ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಮಾತ್ರ ನಡೆಸಬೇಕು ಎಂದು ವಿನಂತಿಸಿ ಸಾರ್ವಜನಿಕರು ಪರಸ್ಪರ ಸಹಕಾರ ನೀಡಿ ಸಾರ್ವಜನಿಕ ಆಸ್ತಿಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಲೋಕೋಪಯೋಗಿ ಮನವಿ ಮಾಡಿದೆ.
HDK ಕುಮ್ಮಕ್ಕಿನಿಂದಲೇ ಪ್ರಜ್ಜಲ್ ರೇವಣ್ಣ ಜೈಲಿಗೆ ಹೋಗಿದ್ದು: ಮದ್ದೂರು ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ








