ಬೆಂಗಳೂರು : ರಸ್ತೆ ಗುಂಡಿ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಇದೀಗ ಎಚ್ ಡಿ ಕುಮಾರಸ್ವಾಮಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬರಿ ಟ್ವೀಟ್ ಮಾಡಿಕೊಂಡು ಕೂರೋದಲ್ಲ ನೀನು ಕೇಂದ್ರ ಸಚಿವ ಬೆಂಗಳೂರಿಗೆ ನಿನ್ನ ಕೊಡುಗೆ ಏನಪ್ಪಾ ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಅಂತ ಹೇಳಿದ್ದೆ ಎಲ್ಲಿ ಮೇಕದ ಟು ಯೋಜನೆಗೆ ಅನುಮತಿ ಕೊಡಿಸಿದೆ ಬರಿ ಡಿಲೀಟ್ ಮಾಡಿಕೊಂಡು ಕುಳಿತುಕೊಂಡರೆ ಆಗುವುದಿಲ್ಲ ರಸ್ತೆಗುಂಡಿ ಮುಟ್ಟುವುದಕ್ಕೆ ಅಕೌಂಟೆಬಿಲಿಟಿ ಫಿಕ್ಸ್ ಮಾಡಿದ್ದೇನೆ ನಿನ್ನೆ ಮಳೆ ನೋಡಿ ಗಾಬರಿ ಆಯಿತು ರಾತ್ರಿ ಎಲ್ಲ ಎಚ್ಚರವಿದ್ದೇ. ಯಾರೋ ನಾಲ್ಕು ಜನ ಟ್ವೀಟ್ ಮಾಡಿ ಬಿಡುತ್ತಾರೆ. ಮುಂಬೈ ಮತ್ತು ಬೇರಿನಗರದ ಗುಂಡಿಗಳ ಬಗ್ಗೆ ಯಾಕೆ ಬರುತ್ತಿಲ್ಲ?
ಟ್ವೀಟ್ ಮೂಲಕ ಬೆದರಿಕೆ ಹಾಕುವವರು ರಾಜಕೀಯಕ್ಕೆ ಬರಲಿ ಆಂಧ್ರಪ್ರದೇಶಕ್ಕೆ ಉದ್ಯಮಿಗಳು ಹೋಗುತ್ತಿಲ್ಲ. ಅದಕ್ಕೆ ಕರೆಯುತ್ತಿದ್ದಾರೆ ಶಾಸಕರಿಗೆ ಕೊಡುವ ಅನುದಾನ ರಸ್ತೆಗಳಿಗೆ ಬಳಸಿ ಅಂತ ಹೇಳಿದ್ದೇವೆ. ರಸ್ತೆಗುಂಡಿಗಳ ವಿಚಾರವಾಗಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ನಾನು ಚರ್ಚಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ ಮಾತನಾಡುತ್ತೇನೆ. ರಸ್ತೆಗುಂಡಿಗಳ ಪಟ್ಟಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ 4 ಸಾವಿರ ರಸ್ತೆಗುಂಡಿಗಳಿವೆ ಎಂಬ ದಾಖಲೆ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.