ಉತ್ತರಪ್ರದೇಶ : ವಯಸ್ಸಿಗೆ ಬಂದ ಯುವಕರಿಗೆ ಸಾಮಾನ್ಯವಾಗಿ ಹಿರಿಯರು, ಸಂಬಂಧಿಕರು ಹಾಗೂ ಫ್ರೆಂಡ್ಸ್ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ ಮದುವೆ ಯಾವಾಗ? ಅಂತ. ಆದರೆ ಇದೀಗ ಈ ರೀತಿ ಪ್ರಶ್ನೆ ಕೇಳುವ ಮುಂಚೆ ಈ ಸುದ್ದಿಯನ್ನು ಒಮ್ಮೆ ಓದಿ. ಉತ್ತರ ಪ್ರದೇಶದಲ್ಲಿ ಮದುವೆ ಯಾವಾಗ ಎಂದು ತಮಾಷೆ ಮಾಡಿದ ಅತ್ತಿಗೆಯನ್ನೇ ಮೈದುನನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಹೌದು ಉತ್ತರ ಪ್ರದೇಶದ ಬಂದಾ ಪಟ್ಟಣದಲ್ಲಿ ಈ ಒಂದು ಕೊಲೆ ನಡೆದಿದ್ದು, ಕೊಲೆ ಆರೋಪಿಯನ್ನು ಸುನೀಲ್ ಹಾಗೂ ಕೊಲೆಯಾದ ಆತನ ಅತ್ತಿಗೆಯನ್ನು ಆಶಾದೇವಿ ಎಂದು ಗುರುತಿಸಲಾಗಿದೆ. ಆಶಾದೇವಿ ತನ್ನ ಮೈದುನನೊಂದಿಗೆ ಆಗಾಗ್ಗೆ ಮದುವೆ ವಿಚಾರವಾಗಿ ತಮಾಷೆ ಮಾಡುತ್ತಲೇ ಇದ್ದಳು. ಇದರಿಂದ ಮನನೊಂದಿದ್ದ ಮೈದುನ ಆಕೆಯನ್ನು ಕೊಂದೇಬಿಟ್ಟಿದ್ದಾನೆ.
ಕೊಲೆಯಾದ ಆಶಾದೇವಿ ಮೈದುನ ಸುನೀಲ್ ಗೆ ಆಗಾಗ ತಮಾಷೆಯಾಗಿ ಮದುವೆ ಯಾವಾಗ ಆಗುತ್ತೀಯ ಎಂದು ಕಿಚಾಯಿಸುತ್ತಿದ್ದಳು. ಅಲ್ಲದೆ ಸುನೀಲ್ ಆಗಾಗ ಆಶಾದೇವಿಗೆ ಹಣದ ಸಹಾಯ ಮಾಡುತ್ತಿದ್ದ. ಈ ವಿಷಯ ಸುನಿಲ್ ತಾಯಿಗೆ ಅಸಮಾಧಾನ ತಂದಿದೆ. ಆದರೂ ಕೂಡ ಆಶಾದೇವಿ ಮೈದುನನಿಗೆ ಮದುವೆ ಯಾವಾಗ ಎಂದು ತಮಾಷೆ ಮಾಡುತ್ತಲೇ ಇದ್ದಳು ಇದರಿಂದ ಬೇಸತ್ತು ತಮಾಷೆ ಮಾಡುವುದನ್ನು ನಿಲ್ಲಿಸಿ ಎಂದು ಒಂದು ಬಾರಿ ಗದ್ದರಿದ್ದ.
ಕಳೆದ ನವೆಂಬರ್ 3 ರಂದು ರಾತ್ರಿ ಸುನಿಲ್ ಆಶಾದೇವಿಯ ಕೋಣೆಗೆ ಹೋಗಿ ದೊಣ್ಣೆಯಿಂದ ಬಲವಾಗಿ ತಲೆಗೆ ಹೊಡೆದು, ಮನೆಯಿಂದ ಹೊರಗಡೆ ಆಕೆಯ ದೇಹವನ್ನು ತಂದಿದ್ದಾನೆ. ನಂತರ ಇಟ್ಟಿಗೆಯಿಂದ ಜಜ್ಜಿಕೊಂಡು ಸಮೀಪದಲ್ಲಿರುವ ತಿಪ್ಪೆಯಲ್ಲಿ ಹಣ ಬಿಸಾಡಿದ್ದಾರೆ. ನಂತರ ಬೆಳಿಗ್ಗೆ ಮನೆಯವರೆಲ್ಲರೂ ಆಶಾದೇವಿಗಾಗಿ ಹುಡುಕಾಟ ನಡೆಸಿದಾಗ ಸಮೀಪದಲ್ಲಿರುವ ತಿಪ್ಪೆಯಲ್ಲಿ ಆಶಾದೇವಿಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಯ ವೇಳೆ ಮೈದುನ ಸುನಿಲ್ ಕೊಲೆ ಮಾಡಿರುವುದಾಗಿ ಬಹಿರಂಗವಾಗಿದೆ.