ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಹವು ಅತಿಯಾಗಿ ಬಿಸಿಯಾದಾಗ, ಬಾಯಿ ಮತ್ತು ನಾಲಿಗೆ ಮೇಲೆ ಹುಣ್ಣು ಬರೋದು ಸಾಮಾನ್ಯ. ಅದ್ರಂತೆ, ಯುವತಿಯೊಬ್ಬಳಿಗೆ ಹೀಗೆ ನಾಲಿಗೆಯ ಮೇಲೆ ಹುಣ್ಣು ಕಾಣಿಸಿಕೊಂಡಿದ್ದು, ಆಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದ್ರೆ, ನೋವು ಹೆಚ್ಚಾದಂತೆ, ಆಕೆ ದಂತವೈದ್ಯರ ಬಳಿಗೆ ಹೋಗಿದ್ದಾಳೆ. ಅವ್ರು ಕೆಲವೊಂದಿಷ್ಟು ಔಷಧಿಗಳನ್ನ ನೀಡಿದ್ದಾರೆ. ಅವುಗಳನ್ನ ಬಳಸಿದರೂ, ನೋವು ಕಡಿಮೆಯಾಗಿಲ್ಲ. ಹೀಗಾಗಿ ಆಕೆಗೆ ಹಲವು ಪರೀಕ್ಷೆಗಳನ್ನ ನಡೆಸಲಾಯಿತು. ಇದ್ರಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿದ್ದು, ಅದು ಕ್ಯಾನ್ಸರ್ ಎಂದು ಗೊತ್ತಾಗಿದೆ.
ಷಾರ್ಲೆಟ್ ವೆಬ್ಸ್ಟರ್ ಸಾಲ್ಟರ್ ಎಂಬ 27 ವರ್ಷದ ಮಹಿಳೆ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ, ಮೊದಲ ಬಾರಿಗೆ ಅವರ ನಾಲಿಗೆ ಮೇಲೆ ಹುಣ್ಣುಗಳು ಕಾಣಿಸಿಕೊಂಡಿವೆ. ನೋವು ತಾಳದೇ ದಂತವೈದ್ಯರನ್ನ ಸಂಪರ್ಕಿಸಿದ್ದು, ವೈದ್ಯರ ಸಲಹೆಯಂತೆ ಬಾಯಿ ಮತ್ತು ಹಲ್ಲುಗಳನ್ನ ಸ್ವಚ್ಛಗೊಳಿಸಲು ಪ್ರಾರಂಭಿಸಿದ್ರು. ಆದ್ರೆ, ಎರಡು ವರ್ಷಗಳ ನಂತರ, ಮತ್ತೆ ಅದೇ ಸ್ಥಳದಲ್ಲಿ ಹುಣ್ಣುಗಳು ಕಾಣಿಸಿಕೊಂಡವು. ಹ್ಯಾಂಗೊವರ್, ಮಸಾಲೆಯುಕ್ತ ಆಹಾರವನ್ನ ತಿನ್ನುವುದು, ಹೀಗಾಗುತ್ತದೆ ಎಂದು ಯೋಚಿಸಿ, ಅವಳು ಅದನ್ನ ನಿರ್ಲಕ್ಷಿಸಿದಳು. ಆದ್ರೆ, ಅವುಗಳಿಂದಾಗಿ ಅವಳ ನಾಲಿಗೆ ಬೆಳ್ಳಗಾಯಿತು ಮತ್ತು ಗಾಯಗಳು ಉಲ್ಬಣಗೊಂಡವು. ಅವರು ಅಂತಿಮವಾಗಿ 2012ರಲ್ಲಿ ಕಿವಿ, ಮೂಗು ಮತ್ತು ಗಂಟಲು ವೈದ್ಯರನ್ನು ಸಂಪರ್ಕಿಸಿದರು. ಇಂಗ್ಲೆಂಡ್ನ ಚಿಚೆಸ್ಟರ್ ಸೇಂಟ್ ರಿಚರ್ಡ್ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ವೈದ್ಯರು ಆಕೆಯ ನಾಲಿಗೆಯಲ್ಲಿ ಗಡ್ಡೆಯನ್ನ ಪತ್ತೆ ಮಾಡಿದರು.
ಆಕೆಯ ನಾಲಿಗೆಗೆ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಇದು ನಿಧಾನವಾಗಿ ಬಾಯಿ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ರೀತಿಯ ಕ್ಯಾನ್ಸರ್ ಸಾಮಾನ್ಯವಾಗಿ ಭಾರೀ ಧೂಮಪಾನಿಗಳಲ್ಲಿ ಕಂಡುಬರುತ್ತದೆ. ಆದರೆ ಆಕೆಗೆ ಆ ಅಭ್ಯಾಸ ಇಲ್ಲದಿದ್ದರೂ ಆಕೆಗೆ ಈ ಕ್ಯಾನ್ಸರ್ ಬಂದಿರುವುದು ವೈದ್ಯರನ್ನೇ ಅಚ್ಚರಿಗೊಳಿಸಿದೆ. ರೋಗನಿರ್ಣಯದ ನಂತರ, ಆಕೆಗೆ ನಾಲಿಗೆಗೆ ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಸುಮಾರು ಒಂಬತ್ತು ಗಂಟೆಗಳ ಶ್ರಮದ ನಂತರ ನಾಲಿಗೆಯ ಒಂದು ಭಾಗವನ್ನ ತೆಗೆಯಬೇಕಾಯಿತು. ಇನ್ನು ವೈದ್ಯರು ಆಕೆಯ ತೊಡೆಯಿಂದ ಸ್ವಲ್ಪ ಮಾಂಸವನ್ನ ತೆಗೆದು ನಾಲಿಗೆಗೆ ಸಾಮಾನ್ಯ ಆಕಾರವನ್ನ ತರಲು ಪ್ರಯತ್ನಿಸಿದರು.
ಇನ್ನು ಯುವತಿ ಶಸ್ತ್ರಚಿಕಿತ್ಸೆಯ ನಂತ್ರ ಎರಡು ವಾರಗಳವರೆಗೆ ಉಸಿರಾಟದ ತೊಂದರೆ ಎದುರಿಸಬೇಕಾಯಿತು. ನಂತರ, ವೈದ್ಯರು ಆಕೆಗೆ ಹೊಸ ನಾಲಿಗೆಯಿಂದ ಹೇಗೆ ಮಾತನಾಡಬೇಕು ಮತ್ತು ತಿನ್ನಬೇಕು ಎಂಬುದರ ಕುರಿತು ವಿಶೇಷ ಫಿಸಿಯೋಥೆರಪಿ ನೀಡಿದರು. ಕೆಲವು ದಿನಗಳ ನಂತರ ಯುವತಿ ಚೇತರಿಸಿಕೊಂಡಳು ಮತ್ತು ಸ್ವಲ್ಪ ಮಾತನಾಡಲು ಪ್ರಾರಂಭಿಸಿದಳು.
ನಾಲಿಗೆ ಕ್ಯಾನ್ಸರ್ನ ಲಕ್ಷಣಗಳು
* ನಾಲಿಗೆಯ ಮೇಲೆ ಕೆಂಪು ಅಥವಾ ಬಿಳಿ ತೇಪೆ ಕಾಣಿಸಿಕೊಳ್ಳುವುದು
* ನಾಲಿಗೆಯಲ್ಲಿ ಹುಣ್ಣುಗಳು
* ನುಂಗುವಾಗ ನೋವು
* ನಾಲಿಗೆಯಲ್ಲಿ ನೋವು ಅಥವಾ ಉರಿ
* ಮಾತನಾಡಲು ತೊಂದರೆ, ನಾಲಿಗೆ ಚಲಿಸಲು ತೊಂದರೆ
* ನಾಲಿಗೆಯಿಂದ ರಕ್ತಸ್ರಾವ
ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ತೋರದೆ ಕೂಡಲೇ ವೈದ್ಯರನ್ನ ಸಂಪರ್ಕಿಸಿ ಪರೀಕ್ಷೆಗೆ ಒಳಪಡಿಸಿ ಎಂದು ತಜ್ಞರು ಎಚ್ಚರಿಸಿದ್ದಾರೆ. ತಡವಾದರೆ ನಾಲಿಗೆ ತೆಗೆಯುವುದರಿಂದ ಮಾತು ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.
BIGG NEWS : ‘ಹೊನ್ನಾಳಿ ಚಂದ್ರಶೇಖರ್’ ಸಾವಿನ ತನಿಖೆಗೆ ‘ಡಯಾಟಮ್ ಟೆಸ್ಟ್’ ಮೊರೆ ಹೋದ ‘FSL’ ತಂಡ
ಕತ್ತಲೆಯ ಕೂಪದಲ್ಲಿ ಚಾಮರಾಜನಗರದ ಚಾಮರಾಜೇಶ್ವರ.! ಮೈಮರೆತ ಜಿಲ್ಲಾಡಳಿತ.!
BIG NEWS: ಆಸ್ಪತ್ರೆಯಲ್ಲಿ ಅಮಾನವೀಯವಾಗಿ ನಡೆದುಕೊಂಡರೆ ವಜಾ: ಮುಂದಿನ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ