ಕೆಎನ್ಎನ್ ಡಿಜಿಟಲ್ ಡೆಸ್ಕ್ : ಯಾವುದೇ ಕೆಲಸ ಮಾಡಿದರು ಅದಕ್ಕೊಂದು ಕಾರ್ಯ ವಿಧಾನ ಇದ್ದೆ ಇರುತ್ತದೆ. ಅದರಂತೆ ದುಡ್ಡನ್ನು ಎಣಿಸುವಾಗಲೂ ಕೆಲವು ವಿಧಾನಗಳಿವೆ. ನಾವು ತಪ್ಪುಗಳನ್ನು ಮಾಡಿದ್ರ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳಂತೆ. ಇದರಿಂದ ಜೀವನದಲ್ಲಿ ಹಣದ ನಷ್ಟ ಮತ್ತು ಆದಾಯ ನಷ್ಟವಾಗುತ್ತದೆ.
ಹಣವನ್ನು ಎಣಿಸುವಾಗ ಮಾಡಿದ ತಪ್ಪುಗಳು ಲಕ್ಷ್ಮಿದೇವಿಯನ್ನು ಕೋಪಗೊಳ್ಳುವಂತೆ ಮಾಡುತ್ತವೆ. ಇದರಿಂದಾಗಿ ಅನಗತ್ಯ ಖರ್ಚು, ಹಣ ಮನೆಯಲ್ಲಿ ಉಳಿಯದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಣವನ್ನು ಎಣಿಸುವಾಗ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿದೆ ಮಾಹಿತಿ.
ಹಣವನ್ನು ಎಣಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಪರ್ಸ್ ನಲ್ಲಿ ಅನಗತ್ಯ ವಸ್ತುಗಳನ್ನು ಇಡಬಾರದು
ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹಣವನ್ನು ಎಣಿಸುವಲ್ಲಿ ತಪ್ಪುಗಳನ್ನು ಮಾಡಬಾರದು. ಆದ್ದರಿಂದ, ಪರ್ಸ್ನಲ್ಲಿ ಹಣವನ್ನು ಮಾತ್ರ ಇಟ್ಟುಕೊಳ್ಳಿ, ಅನಗತ್ಯ ಪೇಪರ್ಗಳು ಅಥವಾ ಬಿಲ್ಗಳನ್ನು ಇಡಬೇಡಿ. ಹೀಗೆ ಮಾಡುವುದರಿಂದ ಹಣದ ನಷ್ಟವಾಗುತ್ತದೆ ಮತ್ತು ಹಣವು ನಿಮ್ಮ ಬಳಿ ಉಳಿಯುವುದಿಲ್ಲ.
ನೋಟುಗಳಿಗೆ ಉಗುಳು ಹಚ್ಚಬಾರದು
ಅನೇಕ ಜನರು ಅಂಟಿಕೊಂಡಿರುವ ನೋಟುಗಳನ್ನು ತೆಗೆಯಲು ಉಗುಳು ಹಚ್ಚುವ ಅಭ್ಯಾಸವಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಕಷ್ಟಪಟ್ಟು ಕೆಲಸ ಮಾಡಿ ದುಡಿದ ಹಣ ಕೂಡ ಕೈಯಲ್ಲಿ ನಿಲ್ಲುವುದಿಲ್ಲ. ಅಲ್ಲದೆ, ನೋಟುಗಳಿಗೆ ಉಗುಳು ಹಚ್ಚುವುದರಿಂದ ಈ ಕೊಳಕು ಅಭ್ಯಾಸವು ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.
ನೋಟುಗಳನ್ನು ತಿರುಚಬಾರದು
ನೋಟುಗಳನ್ನು ಯಾವತ್ತೂ ತಿರುಚಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಯೂ ಕೋಪಗೊಳ್ಳುತ್ತಾಳೆ. ನೋಟುಗಳನ್ನು ಯಾವಾಗಲೂ ಕ್ರಮಬದ್ಧವಾಗಿ ಮತ್ತು ಗೌರವಯುತವಾಗಿ ಇರಿಸಿ.
BIG NEWS: ‘ಗೃಹ ರಕ್ಷಕದಳದ ಸಿಬ್ಬಂದಿ’ಯನ್ನು ‘ನೋಟಿಸ್ ನೀಡದೆ’ಯೂ ‘ಅಮಾನತು’ಗೊಳಿಸಬಹುದು – ಹೈಕೋರ್ಟ್