ನವದೆಹಲಿ : ರಾಜ್ಯಕ್ಕೆ ಸಿಗಬೇಕಾದ ಅನುದಾನದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಿರುವ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯದಿಂದ ಆಯ್ಕೆಯಾದ ಸಂಸದರ ಜೊತೆ ಚರ್ಚಿಸಿದ್ದೇವೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ನಾವು ಚರ್ಚೆ ಮಾಡಿದ್ದೇವೆ. ಪಕ್ಷಭೆದ ಮರೆತು ಕರ್ನಾಟಕದ ಒಳಿತಿಗಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೇವೆ.ರಾಜ್ಯದ ಯೋಜನೆಗಳನ್ನು ಸಂಸತ್ ಸದಸ್ಯರ ಗಮನಕ್ಕೆ ತರಲಾಗಿದೆ ಎಂದರು.
ಕೇಂದ್ರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಲು ಹೇಳಿದ್ದೇವೆ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷಭೇದ ಮರೆತು ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಮಂತ್ರಿಗಳು ಉತ್ತರದ ರೂಪದಲ್ಲಿ ಪತ್ರ ಕೊಟ್ಟಿದ್ದಾರೆ. ಬಿಜೆಪಿ ತನ್ನ ನಿಲುವುಗಳನ್ನ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅನೇಕ ಸುಳ್ಳುಗಳಿವೆ ಎಂದರು.
ಉದಾಹರಣೆಗೆ ಮಹದಾಯಿ ಕುಡಿಯುವ ನೀರಿನ ಯೋಜನೆ. ಮಹದಾಯಿ ಯೋಜನೆ ಬಗ್ಗೆ ಕೋರ್ಟ್ ನಲ್ಲಿ ಕೇಸ್ ಇದೆ ಅಂದಿದ್ದಾರೆ. ಗೆಜೆಟ್ ನೋಟಿಫಿಕೇಶನ್ ಆಗಿದೆ. ಅದಕ್ಕೆ ಪರಿಸರ ಅನುಮತಿ ಬೇಕಿದೆ ಅಷ್ಟೇ. ಮಹದಾಯಿ ಯೋಜನೆ ಈಗ ಕೇಂದ್ರ ಸರ್ಕಾರದ ಮುಂದೆ ಇದೆ. ಕೋರ್ಟ್ ಅಲ್ಲಿ ಕೇಸ್ ಇದೆ ಅಂತ ನೆಪ ಹೇಳಿದ್ದಾರೆ.ಪರಿಸರ ಅನುಮತಿ ಕೊಡಬೇಕೆಂದು ಕೇಂದ್ರದ ಬಳಿ ಕೇಳಿದ್ದೇವೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಘೋಷಣೆ ಮಾಡಿರುವ ಅನುದಾನ ಕೇಂದ್ರ ಬಿಡುಗಡೆ ಮಾಡಿಲ್ಲ ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಸಹ ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರದ ತಾಂತ್ರಿಕ ಸಮಸ್ಯೆ ಅಂತ ಹೇಳಿದ್ದಾರೆ ನಮ್ಮ ಸರ್ಕಾರದಿಂದ ಆ ರೀತಿಯ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ. ನಾವು ಪತ್ರ ಬರೆದು ಫೈಲ್ ಕೂಡ ಕಳುಹಿಸಿದ್ದೇವೆ ಎಂದು ತಿಳಿಸಿದರು.
5300 ಕೋಟಿ ರೂಪಾಯಿ ಕೊಡುವುದಾಗಿ ನಿರ್ಮಲ ಸೀತಾರಾಮನ್ ಒಪ್ಪಿಕೊಂಡಿದ್ದಾರೆ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡುವ ಒತ್ತಾಯವಿದೆ ಇದಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ಕೂಡ ಬೆಂಬಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
2018ರಿಂದಲೂ ಮೇಕೆದಾಟು ಯೋಜನೆ ಪೆಂಡಿಂಗ್ ಇದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗು ಅನುಕೂಲವಾಗಲಿದೆ. ತಮಿಳುನಾಡಿನವರು ನ್ಯಾಯಾಲಯದಲ್ಲಿ ಕೆಸ್ ಹಾಕಿದ್ದಾರೆ. ಆದರೆ ಯೋಜನೆಗೆ ಯಾವುದೇ ತಡೆ ನೀಡಿಲ್ಲ. ಅದನ್ನು ಕೂಡ ನಾವು ಕೇಂದ್ರ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಹೆಚ್ಚುವರಿ ನೀರು ಸಂಗ್ರಹಿಸಲು ಮೇಕೆದಾಟು ಅವಶ್ಯಕತೆವಾಗಿದೆ. 2022 ರಲ್ಲಿ 490 ಟಿಎಂಸಿ ಹೆಚ್ಚುವರಿ ನೀರು ಹರಿದುಹೋಗಿದೆ. ಹೆಚ್ಚುವರಿ ನೀರು ಬಳಸಿಕೊಳ್ಳಲು ಎರಡು ರಾಜ್ಯಗಳಿಗೆ ಸಹಾಯಕವಾಗಲಿದೆ. ಕೃಷ್ಣ ನೀರು ಹಂಚಿಕೆ ವಿಚಾರವಾಗಿ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ ಎಂದು ತಿಳಿಸಿದರು.