ನವದೆಹಲಿ : ಮುಡಾ ಪ್ರಕರಣದ ವಿರುದ್ಧ ಮೈತ್ರಿ ಪಕ್ಷಗಳಿಂದ ಪಾದಯಾತ್ರೆ ಮಾಡಲಾಗುತ್ತಿದೆ. ಇದಕ್ಕೆ ಟಕ್ಕರ್ ಎಂಬಂತೆ ಕಾಂಗ್ರೆಸ್ ಜನಾಂದೋಲನ ಮಾಡಿದೆ. ಇವೆರಡೂ ಈಗ ಡಿಕೆ ಶಿವಕುಮಾರ್ ಮತ್ತು ಹೆಚ್ಡಿ ಕುಮಾರಸ್ವಾಮಿ ಮಧ್ಯೆ ವೈಯಕ್ತಿಕ ಟೀಕೆಗಳು ಬರುತ್ತಿದ್ದು, ಇದೀಗ ಮಾಡಿದ್ರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಇಂದು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ಮಗನನ್ನು ಬೆಳೆಸಲು ಮತ್ತೊಬ್ಬ ಮಗನನ್ನು ಮುಗಿಸಿದರು. ಮನುಷ್ಯನ ಅವನು. ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು.ನನ್ನ ಕುಟುಂಬದ ವಿರುದ್ಧ ಮಾತಾಡ್ತಾರಾ. 10 ತಿಂಗಳಲ್ಲಿ ಸರ್ಕಾರ ಬೀಳಿಸಲು ಸಂಚು ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ. ಸರ್ಕಾರ ಬೀಳಿಸಲು ಟ್ರೈಮಾಡಿದ್ದಾರೆಂದು ಅಜ್ಜಯ್ಯ ಹೇಳಿದ್ರಾ? ಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕುತಂತ್ರ ಮಾಡುತ್ತಿರುವವರು ಯಾರು. ಹೆಚ್.ಡಿ.ರೇವಣ್ಣ ಮತ್ತು ಮಕ್ಕಳ ವಿರುದ್ಧ ಷಡ್ಯಂತ್ರ ಮಾಡಿದ್ದು ಯಾರು? ಅವರನ್ನು ಜೈಲಿಗೆ ಕಳುಹಿಸಿದವರು ಯಾರು? ನಮ್ಮ ಕುಟುಂಬದ ವಿರುದ್ಧ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇವತ್ತಿನ ಕಾಂಗ್ರೆಸ್ ನಾಯಕರ ಜನಾಂದೋಲನ ಕಾರ್ಯಕ್ರಮ ನಾಚಿಕೆ ಆಗಬೇಕು. ವಿರೋಧ ಪಕ್ಷದಲ್ಲಿದ್ದಾಗ ಬೊಗಳೆ ಬಿಟ್ಟರು. ಸಾಕ್ಷಿಗಳಿಲ್ಲದೇ ಅವರು ಆರೋಪ ಮಾಡಿದರು. ವಿರೋಧ ಪಕ್ಷದ ಸ್ಥಾನಕ್ಕೆ ಅತ್ಯಂತ ನಿಷ್ಕ್ರಿಯವಾಗಿ ಸಿದ್ದರಾಮಯ್ಯ ಕೆಲಸ ಮಾಡಿದ್ದರು. ಕಡಿಮೆ ಸಂಖ್ಯೆ ಇದ್ದ ಜೆಡಿಎಸ್ ದಾಖಲೆ ಸಮೇತ ಹೋರಾಟ ಮಾಡಿದ್ದೇವು ಎಂದಿದ್ದಾರೆ.