ಕೆಎನ್ಎನ್ಡಿಜಿಟಲ್ ಡೆಸ್ಕ್ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜಸ್ಥಾನ ತಲುಪಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ವಿಶೇಷ ಸಭೆ ನಡೆಸಿದರು. ಈ ವೇಳೆ ಕುತೂಹಲಕಾರಿ ಮಾತುಗಳನ್ನಾಡಿದ್ದು, ಹಿಂದಿನದನ್ನ ಅಗೆಯುವುದನ್ನು ಬಿಟ್ಟು ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಎಂದು ರಾಹುಲ್ ಪದೇ ಪದೇ ಹೇಳಿದರು.
ಇನ್ನು ಇದೇ ವೇಳೆ ಕೆಲವರು ತಮ್ಮನ್ನ ಮಹಾತ್ಮ ಗಾಂಧಿಯವರೊಂದಿಗೆ ಹೋಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಇದು ತುಂಬಾ ತಪ್ಪು. ಮಹಾತ್ಮರ ಹೋರಾಟವೇ ಬೇರೆ, ನಾವು ಮಾಡುತ್ತಿರುವುದು ಬೇರೆ. ಒಬ್ಬರನ್ನೊಬ್ಬರು ಹೋಲಿಕೆ ಮಾಡುವುದು ಸರಿಯಲ್ಲ. ಗಾಂಧೀಜಿಯವರು ಮಹಾನ್ ವ್ಯಕ್ತಿ.ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟರು. ಅವರು 10-12 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರು ಮಾಡಿದ ತ್ಯಾಗವನ್ನ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಅವ್ರ ಮಟ್ಟವನ್ನ ಯಾರೂ ತಲುಪಲು ಸಾಧ್ಯವಿಲ್ಲ. ಅವರ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ” ಎಂದು ಪಕ್ಷದ ಕಾರ್ಯಕರ್ತರಿಗೆ ಮೃದುವಾಗಿ ಸಲಹೆ ನೀಡಿದರು.
ಇನ್ನು ಇದೇ ವೇಳೆ ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಸೇವೆಯನ್ನೂ ಸ್ಮರಿಸಿದರು.‘ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ದೇಶ ಸೇವೆ ಮಾಡಿದ್ದಾರೆ. ಹುತಾತ್ಮರಾದರು. ಆದರೆ… ಭೇಟಿಯಾದಾಗಲೆಲ್ಲಾ ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರ್ ಲಾಲ್ ನೆಹರು, ಮಹಾತ್ಮ ಗಾಂಧಿ ಅವರು ತಮ್ಮ ಕೈಲಾದಷ್ಟು ಮಾಡಿದರು. ನಾವು ಏನು ಮಾಡಬಹುದು ಎಂಬುದರ ಬಗ್ಗೆಯೂ ಯೋಚಿಸಬೇಕು. ಅದರತ್ತ ಗಮನ ಹರಿಸಿ. ಜನರಿಗಾಗಿ ನಾವು ಏನು ಮಾಡುತ್ತಿದ್ದೇವೆ ಎಂಬುದನ್ನ ನೋಡಬೇಕು” ಎಂದು ಹೇಳಿದರು.
BIGG NEWS : “ಚೀನಾ ಯುದ್ಧಕ್ಕೆ ತಯಾರಿ ನಡೆಸ್ತಿದೆ, ಆದ್ರೆ ನಮ್ಮ ಸರ್ಕಾರ ಅದನ್ನ ಒಪ್ಪಿಕೊಳ್ತಿಲ್ಲ” : ರಾಹುಲ್ ಗಾಂಧಿ
BIGG NEWS : ಕೊರಿಯರ್ ಮೂಲಕ ಶಾರೀಖ್ ಗೆ ಬರ್ತಿತ್ತು ಬಾಂಬ್ ತಯಾರಿಸುವ ಸಾಮಾಗ್ರಿ : ಸ್ಪೋಟಕ ಮಾಹಿತಿ ಬಯಲು