ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹಿಂದೂ ಸಂಘಟನೆಗಳಿಂದ ಹಲಾಲ್ ಕಟ್ ಕ್ಯಾಂಪೇನ್ ಮುನ್ನಲೆಗೆ ಬಂದಿದ್ದು, ದೀಪಾವಳಿ ಹಬ್ಬದ ಸಮಯದಲ್ಲಿ ಹಲಾಲ್ ಕಟ್ ಮಾಂಸ ಖರೀದಿಸದಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Ram Sene founder Pramod Muthalik) ಕರೆ ನೀಡಿದ್ದಾರೆ
ಈ ಹಲಾಲ್ ಕಟ್ ದಂಗಲ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ ಹಿಂದೂ ವ್ಯಾಪಾರಿಗಳಿಂದಲೇ ಹಬ್ಬಕ್ಕೆ ಬೇಕಾದ ಬಟ್ಟೆ, ಪಟಾಕಿ, ಪೂಜಾ ಸಾಮಾಗ್ರಿಗಳನ್ನು ಖರೀದಿಸಿ. ಮುಸ್ಲಿಂ ವ್ಯಾಪಾರಿಗಳ ಬಳಿ ವ್ಯಾಪಾರ ಮಾಡಬೇಡಿ. ಹಲಾಲ್ ಮಾಂಸ, ಉತ್ಪನ್ನಗಳ ಖರೀದಿಯಿಂದ ದೂರವಿರಿ. ಹಲಾಲ್ ಉತ್ಪನ್ನಗಳ ಮಾರಾಟದಿಂದ ಬಂದ ಹಣ ದೇಶದ ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿದೆ. ಹೀಗಾಗಿ ಮುಸ್ಲಿಮರ ಬಳಿ ವ್ಯಾಪಾರ ಮಾಡದಂತೆ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.
ದೇಶದ ಕಾನೂನು ಗೌರವಿಸದವರ ಬಳಿ ವ್ಯಾಪಾರ ಯಾಕೆ ಮಾಡಬೇಕು ? ಹಿಂದೂಗಳ ಹಬ್ಬ, ಭಾವನೆಗಳನ್ನು ವಿರೋಧಿಸುವವರ ಬಳಿ ನಾವ್ಯಾಕೆ ಖರೀದಿ ಮಾಡಬೇಕು ? ಮುಸ್ಲಿಂ ವ್ಯಾಪಾರಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಹಂತ ಹಂತವಾಗಿ ನಮ್ಮ ಅಭಿಯಾನ ಯಶಸ್ವಿಯಾಗಲಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.